ಕರ್ನಾಟಕ

karnataka

ETV Bharat / state

ಕಲಘಟಗಿಯಲ್ಲಿ ಮಾಸ್ಕ್ ಧರಿಸದ 130 ಜನರ ಕೋವಿಡ್ ತಪಾಸಣೆ - Covid inspection in Kalaghatagi

ಹುಬ್ಬಳ್ಳಿ-ಧಾರವಾಡ ಅವಳಿನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಾಸ್ಕ್‌ ಧರಿಸದ ವ್ಯಕ್ತಿಗಳನ್ನು ಕಡ್ಡಾಯವಾಗಿ ಕೋವಿಡ್‌ ತಪಾಸಣೆಗೆ ಒಳಪಡಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ. ಇಂದು ಕಲಘಟಗಿಯಲ್ಲಿ ಈ ಕಾರ್ಯ ಪ್ರಾರಂಭವಾಯಿತು.

Covid inspection in Kalaghatagi
ಕೋವಿಡ್ ತಪಾಸಣೆ

By

Published : Aug 18, 2020, 9:36 PM IST

ಹುಬ್ಬಳ್ಳಿ :ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸುವ ಕಾರ್ಯ ಇಂದು ಕಲಘಟಗಿಯಲ್ಲಿ ಪ್ರಾರಂಭವಾಯಿತು.

ಕೋವಿಡ್ ತಪಾಸಣೆ

ಪಟ್ಟಣ ಪಂಚಾಯತಿ ಬಳಿ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕೌಂಟರ್ ಸ್ಥಾಪಿಸಿ ಮಾಸ್ಕ್ ಧರಿಸದೇ ತಿರುಗಾಡುತ್ತಿದ್ದ 130 ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಯಿತು. ಈ ಪೈಕಿ ಮೂವರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ಅಗತ್ಯ ಚಿಕಿತ್ಸೆಗೆ ಏರ್ಪಾಡು ಮಾಡಲಾಯಿತು.

ಕೋವಿಡ್ ತಪಾಸಣೆ

ತಹಶೀಲ್ದಾರ್​ ಅಶೋಕ ಶಿಗ್ಗಾಂವ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ ಬಾಸೂರ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಚಂದ್ರಶೇಖರ ಬಿ.ತಾವರಗೇರಿ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಮತ್ತಿತರರು ಇದ್ದರು.

ಕೋವಿಡ್ ತಪಾಸಣೆ

ABOUT THE AUTHOR

...view details