ಕರ್ನಾಟಕ

karnataka

ETV Bharat / state

ಪ್ರೀತ್ಸೆ ಪ್ರೀತ್ಸೆ ಅಂತಾ ಬಾಲಕಿಗೆ ಕಾಟ.. ಹುಬ್ಬಳ್ಳಿ ಯುವಕನ ಹುಚ್ಚಾಟಕ್ಕೆ ಕುಟುಂಬಸ್ಥರಿಂದಲೂ ಸಾಥ್​! - ಪ್ರೀತಿಸುವಂತೆ ಒತ್ತಾಯ

ಯುವಕನೊಬ್ಬ ಅಪ್ರಾಪ್ತೆಗೆ ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಅವನ ಮನೆಯವರು ಬಂದು ಜಿವ ಬೆದರಿಕೆ ಹಾಕಿದ್ದಾರೆಂದು ಮಹಿಳೆಯೊಬ್ಬರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

child harassment case
ಅಪ್ರಾಪ್ತೆಗೆ ಪ್ರೀತಿಸುವಂತೆ ಒತ್ತಾಯ

By

Published : Jul 17, 2021, 12:40 PM IST

ಹುಬ್ಬಳ್ಳಿ: ಯುವಕನೋರ್ವ ಅಪ್ರಾಪ್ತೆಗೆ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದಲ್ಲದೆ, ಮನೆಗೆ ಬಂದು ತನ್ನೊಂದಿಗೆ ಬರುವಂತೆ ಒತ್ತಾಯಿಸಿ, ಅವನ ಮನೆಯವರು ಚಾಕು ತೋರಿಸಿ ಬೆದರಿಕೆ ಹಾಕಿರುವ ಘಟನೆ ದೇವಾಂಗಪೇಟೆಯಲ್ಲಿ ನಡೆದಿದೆ.

ಸಾಧಿಕ್ ಎಂಬಾತನೇ ಅಪ್ರಾಪ್ತೆಗೆ ಪ್ರೀತಿಸುವಂತೆ ಒತ್ತಾಯಿಸಿದವನು. ಅಲ್ಲದೇ ಇವನ ತಾಯಿ ಸಹ ಮನೆಗೆ ಬಂದು ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಅವರ ಇನ್ನೋರ್ವ ಮಗನು ಚಾಕು ತೋರಿಸಿ ನಮ್ಮ ವಿರುದ್ಧ ಹೋದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ. ನಿಮ್ಮ ಮಗಳನ್ನು ನಮ್ಮ ಜೊತೆಗೆ ಕಳುಹಿಸಬೇಕೆಂದು ತಕರಾರು ಮಾಡಿದ್ದಾರೆಂದು ಮಹಿಳೆಯೊಬ್ಬರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ:ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ!

ABOUT THE AUTHOR

...view details