ಕರ್ನಾಟಕ

karnataka

ETV Bharat / state

ಮದುವೆ ಮಾತುಕತೆ ಬಳಿಕ ಯುವತಿಗೆ ವಂಚನೆ ಆರೋಪ: ಹುಬ್ಬಳ್ಳಿಯಲ್ಲಿ ಯೋಧನ ವಿರುದ್ಧ ಕೇಸ್​ - ಮ್ಯಾಟ್ರಿಮೋನಿ

ವಿವಾಹ ಮಾತುಕತೆಯ ಬಳಿಕ ಬೇರೊಬ್ಬ ಯುವತಿಯ ಜೊತೆ ವಿವಾಹವಾಗಿ ವಂಚಿಸಿದ್ದಾರೆ ಎಂದು ಆರೋಪಿಸಿ ಬಿಎಸ್​ಎಫ್ ಯೋಧನ ವಿರುದ್ಧ ಯುವತಿ ದೂರು ನೀಡಿದ್ದಾಳೆ.

Case rigistered agaisnt BSF Jawan allegation of cheating
ಬಿಎಸ್​​ಎಫ್ ಯೋಧನ ವಿರುದ್ಧ ಪ್ರಕರಣ ದಾಖಲು

By

Published : Oct 30, 2021, 4:03 PM IST

ಹುಬ್ಬಳ್ಳಿ:ಮ್ಯಾಟ್ರಿಮೋನಿಯಲ್ಲಿ ಪರಿಚಯಗೊಂಡು ಮದುವೆ ಆಗುವುದಾಗಿ ನಂಬಿಸಿ ವಂಚಿಸಿರುವುದಾಗಿ ಬಿಎಸ್ಎಫ್ ಯೋಧನ ವಿರುದ್ಧ ನೊಂದ ಯುವತಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಧಾರವಾಡದ ಗುರುಸಿದ್ದಪ್ಪ ಶಿರೋಳ ಎಂಬ ಬಿಎಸ್‌ಎಫ್ ಯೋಧನ ವಿರುದ್ಧ ಸಂತ್ರಸ್ತೆಯ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೊದಲು ಮ್ಯಾಟ್ರಿಮೋನಿಯಲ್ಲಿ ಮೊಬೈಲ್ ನಂಬರ್ ಪಡೆದಿದ್ದ. ಬಳಿಕ ಇಬ್ಬರ ನಡುವೆ ಪ್ರೇಮಾಂಕುರ ಉಂಟಾಗಿ ಮದುವೆ ಮಾತುಕತೆ ಸಹ ನಡೆದಿತ್ತು ಎನ್ನಲಾಗ್ತಿದೆ. ಆದರೆ ಬಳಿಕ ಮದುವೆ ಆಗುವುದಿಲ್ಲ ಎಂದಿದ್ದ ಗುರುಸಿದ್ದಪ್ಪ ಬೇರೊಬ್ಬಳ ಜತೆ ವಿವಾಹವಾಗಿ ತನಗೆ ವಂಚಿಸಿದ್ದಾರೆ ಎಂದು ಆರೋಪಿಸಿರುವ ಯುವತಿ ಯ ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಕೊಳ್ಳೇಗಾಲ ನಗರಸಭೆಯ ನೂತನ ಉಪಾಧ್ಯಕ್ಷೆಯಾಗಿ ಸುಶೀಲಾ ಆಯ್ಕೆ

ABOUT THE AUTHOR

...view details