ಕರ್ನಾಟಕ

karnataka

ETV Bharat / state

ಅನ್​ಲಾಕ್​ ಆದ್ರೆ ಬಸ್ ಸಂಚಾರ ಆರಂಭ ಆಗುತ್ತಾ?: ಅಧಿಕಾರಿಗಳು ಏನಂತಾರೆ?

ಈಗಾಗಲೇ ಚಾಲಕರು ಮತ್ತು ನಿರ್ವಾಹಕರಿಗೆ ವ್ಯಾಕ್ಸಿನ್ ಹಾಕಿಸಲಾಗಿದೆ ಎಂದು ಗ್ರಾಮೀಣ ವಿಭಾಗದ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡ ತಿಳಿಸಿದ್ದಾರೆ. ಆದ್ರೆ ಅನ್​ಲಾಕ್​ ಆದ್ರೆ, ಸರ್ಕಾರ ಅನುಮತಿ ಕೊಟ್ಟರೆ ಬಸ್​ಗಳು ರಸ್ತೆಗಿಳಿಯುತ್ತವಾ ಎಂಬ ಪ್ರಶ್ನೆಗೆ ಹೌದು ಎನ್ನುತ್ತಾರೆ ನಿಯಂತ್ರಣಾಧಿಕಾರಿಗಳು.

Bus
ಬಸ್

By

Published : Jun 3, 2021, 7:52 PM IST

ಹುಬ್ಬಳ್ಳಿ:ಸರ್ಕಾರ ಅನ್​ಲಾಕ್​ ಮಾಡುವ ನಿರ್ಧಾರಕ್ಕೆ ಬಂದು ಬಸ್‌ಗಳ ಸಂಚಾರಕ್ಕೆ ಅನುಮತಿ ಕೊಟ್ಟರೆ ನಾವು ಮತ್ತೆ ಸಂಚಾರವನ್ನು ಆರಂಭಿಸುತ್ತೇವೆ. ಈಗಾಗಲೇ ಇದಕ್ಕಾಗಿ ಬೇಕಾದ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಗ್ರಾಮೀಣ ವಿಭಾಗದ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡ ತಿಳಿಸಿದ್ದಾರೆ.

ಗ್ರಾಮೀಣ ವಿಭಾಗದ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡ ಮಾತನಾಡಿದರು

ಈ ಕುರಿತು ಮಾತನಾಡಿದ ಅವರು, ಕೊರೊನಾ 2ನೇ ಅಲೆ ಹೆಚ್ಚಾಗುತ್ತಿರುವುದರಿಂದ ಸರ್ಕಾರ ಲಾಕ್​ಡೌನ್​ ಜಾರಿ ಮಾಡಿತ್ತು. ಅದರಂತೆ ಬಸ್ ಸೇವೆಗಳನ್ನು ಸಹ ಸ್ಥಗಿತಗೊಳಿಸಿತ್ತು. ಈಗ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಸರ್ಕಾರ ಅನ್​ಲಾಕ್​ ಮಾಡುವ ನಿರ್ಧಾರಕ್ಕೆ ಬಂದರೆ, ಬಸ್‌ಗಳ ಚಾಲನೆಯನ್ನು ಮಾಡುವುದಾದರೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದರು.

ಈಗಾಗಲೇ ಜೂನ್ 7ರ ವರೆಗೆ ಲಾಕ್ ಇದ್ದು, ಸರ್ಕಾರ ಹೊಸದಾಗಿ ಮಾರ್ಗಸೂಚಿಗೆ ಅನುಗುಣವಾಗಿ ಬಸ್‌ಗಳ ಸಂಚಾರಕ್ಕೆ ಅನುಮತಿ ಕೊಟ್ಟರೆ, ಬಸ್ ನಿಲ್ದಾಣಗಳಿಗೆ, ಬಸ್‌ಗಳಿಗೆ ಸ್ಯಾನಿಟೈಸರ್​ ಸಿಂಪಡಣೆ ಮಾಡಿಸಲಾಗುವುದು. ಈಗಾಗಲೇ ಚಾಲಕರು ಮತ್ತು ನಿರ್ವಾಹಕರಿಗೆ ವ್ಯಾಕ್ಸಿನ್ ಹಾಕಿಸಲಾಗಿದೆ ಎಂದು ತಿಳಿಸಿದ್ದಾರೆ.

ಓದಿ:ರಾಜ್ಯದಲ್ಲಿ ಮತ್ತೊಂದು ವಾರ Lockdown ವಿಸ್ತರಣೆ: 500ಕೋಟಿ ರೂ. ವಿಶೇಷ ಪ್ಯಾಕೇಜ್​ ಘೋಷಿಸಿದ CM

ABOUT THE AUTHOR

...view details