ಕರ್ನಾಟಕ

karnataka

ETV Bharat / state

ಮಾಟದ ಗೊಂಬೆ ಮೇಲೆ ಅಭ್ಯರ್ಥಿಗಳ ಫೋಟೋ: ಕೋಟೂರು ಗ್ರಾಮದಲ್ಲಿ ವಾಮಾಚಾರ - ಮಾಟದ ಗೊಂಬೆ ಮೇಲೆ ಅಭ್ಯರ್ಥಿಗಳ ಫೋಟೋ ಸುದ್ದಿ

ಧಾರವಾಡದ ಜಿಲ್ಲೆಯಲ್ಲಿ ಮತಗಟ್ಟೆಯ ಪಕ್ಕದಲ್ಲೇ ಅಭ್ಯರ್ಥಿಗಳ ಫೋಟೋ ಸಮೇತ ವಾಮಾಚಾರದ ಗೊಂಬೆಯೊಂದು ಪತ್ತೆಯಾಗಿದೆ. ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿರುವ 4 ಅಭ್ಯರ್ಥಿಗಳ ಫೋಟೋವೊಂದನ್ನು ಗೊಂಬೆಗೆ ಕಟ್ಟಿ ವಾಮಾಚಾರ ಮಾಡಲಾಗಿದೆ.

black magic near kotur voting booth
ಮತಗಟ್ಟೆ ಬಳಿ ವಾಮಾಚಾರ

By

Published : Dec 22, 2020, 3:46 PM IST

ಧಾರವಾಡ:ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆಲೆ ಒಂದೆಡೆ ಮತದಾನ ಸರಾಗವಾಗಿ ನಡೀತಾ ಇದ್ರೆ, ಇನ್ನೊಂದೆಡೆ ಮತಗಟ್ಟೆಯ ಪಕ್ಕದಲ್ಲೇ ಅಭ್ಯರ್ಥಿಗಳ ಫೋಟೋ ಸಮೇತ ಮಾಡಲಾದ ವಾಮಾಚಾರದ ಗೊಂಬೆಯೊಂದು ಪತ್ತೆಯಾಗಿದೆ.

ಮತಗಟ್ಟೆ ಬಳಿ ವಾಮಾಚಾರ
ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ಕಪ್ಪು ಬಟ್ಟೆಯಿಂದ ಮಾಡಿದ ಭೂತದ ಗೊಂಬೆಗೆ ಸುಮಾರು ನಾಲ್ಕೈದು ಚುನಾವಣಾ ಅಭ್ಯರ್ಥಿಗಳ ಪಾಸ್​​ಪೋರ್ಟ್ ಅಳತೆಯ ಫೋಟೋಗಳನ್ನು ಕಟ್ಟಿ ವಾಮಾಚಾರ ಮಾಡಲಾಗಿದೆ‌. ಈ ಗೊಂಬೆಯನ್ನು ಕೋಟೂರು ಗ್ರಾಮದ ಮತಗಟ್ಟೆ ಕೇಂದ್ರವಾದ ಸರ್ಕಾರಿ ಪ್ರಾಥಮಿಕ ಶಾಲೆಯ ಪಕ್ಕದಲ್ಲೇ ದುಷ್ಕರ್ಮಿಗಳು ಎಸೆದಿದ್ದಾರೆ‌. ಚುನಾವಣಾ ಅಭ್ಯರ್ಥಿಗಳಾದ ದಾದಾಪೀರ್ ಗಾಂಜಿ, ಪ್ರವೀಣ ಕಮ್ಮಾರ, ವಿಠ್ಠಲ ಕಳ್ಳಿಮನಿ, ಬಸಪ್ಪ ಇಂಗಳಗಿ ಸೇರಿದಂತೆ ಇತರ ಅಭ್ಯರ್ಥಿಗಳ ಫೋಟೋಗಳನ್ನು ವಾಮಾಚಾರದ ಗೊಂಬೆಗೆ ಕಟ್ಟಲಾಗಿದೆ. ಹೀಗಾಗಿ ಈ ಬಗ್ಗೆ ತನಿಖೆ ಆಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ABOUT THE AUTHOR

...view details