ಕರ್ನಾಟಕ

karnataka

ETV Bharat / state

Black Fungus: ಹುಬ್ಬಳ್ಳಿ ಕಿಮ್ಸ್​ನಲ್ಲಿ 120 ಜನರಿಗೆ ಆಪರೇಷನ್: ಕೆಲವರಿಗೆ ಶಾಶ್ವತ ದೃಷ್ಟಿಹೀನತೆ! - Black Fungus,

ಕೋವಿಡ್​ ಸೋಂಕು ನಿಯಂತ್ರಣಕ್ಕೆ ಬಂತೆಂದು ನಿಟ್ಟುಸಿರು ಬಿಡುತ್ತಿರುವ ಸಮಯದಲ್ಲಿ ಬ್ಲ್ಯಾಕ್ ಫಂಗಸ್​ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ದೃಷ್ಟಿಹೀನತೆ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Hubli KIMS Hospital
ಕೋವಿಡ್ ನಡುವೆ ಬ್ಲ್ಯಾಕ್ ಫಂಗಸ್​

By

Published : Jun 26, 2021, 10:03 AM IST

ಹುಬ್ಬಳ್ಳಿ:ಲಾಕ್​ ಡೌನ್​ ಕಾರಣದಿಂದ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದರೂ, ಬ್ಲ್ಯಾಂಗ್ ಫಂಗಸ್ ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಪ್ಪು ಫಂಗಸ್​ನಿಂದ ಕೆಲವರು ಕಣ್ಣು ಕಳೆದುಕೊಂಡರೆ, ಇನ್ನೂ ಕೆಲವರ ಪ್ರಾಣಪಕ್ಷಿ ಹಾರಿಹೋಗಿದೆ.

ಪ್ರಸ್ತುತ 150 ಮಂದಿ ಬ್ಲ್ಯಾಕ್ ಫಂಗಸ್​ ರೋಗಿಗಳು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ 120ಕ್ಕೂ ಹೆಚ್ಚು ಬ್ಲ್ಯಾಕ್​ ಫಂಗಸ್ ಸೋಂಕಿತರಿಗೆ ಕಿಮ್ಸ್​​ನ ಇಎನ್​ಟಿ‌ ವಿಭಾಗದಿಂದ ಆಪರೇಷನ್ ಮಾಡಲಾಗಿದೆ. ಈ ಪೈಕಿ ಹತ್ತು ಜನರು ಸಂಪೂರ್ಣ ಕಣ್ಣು ಕಳೆದುಕೊಂಡು ಶಾಶ್ವತ ದೃಷ್ಠಿ ಹೀನರಾಗಿದ್ದಾರೆ. ಇದರೊಂದಿಗೆ ಬ್ಲ್ಯಾಕ್ ಫಂಗಸ್​ ಸೋಂಕಿತರ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ.

ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾಹಿತಿ

ಓದಿ : ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲೇ ವ್ಯಾಕ್ಸಿನ್ ಕೊರತೆ.. ಅಧಿಕಾರಿಗಳ ವಿರುದ್ಧ ಜನಾಕ್ರೋಶ..

ಬ್ಲ್ಯಾಕ್​ ಫಂಗಸ್​ ಸೋಂಕಿತರು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲವರು ಕಣ್ಣು, ಕಿವಿ, ಮೆದುಳು ರೋಗದಿಂದ, ಇನ್ನೂ ಕೆಲವರು ಬಾಯಿ ದವಡೆ ಸಮಸ್ಯೆಯಿಂದ ನರಳುತ್ತಿದ್ದಾರೆ. ಇವರಿಗೆಲ್ಲ ಚಿಕಿತ್ಸೆ ಕೊಡಿಸುವುದು ವೈದ್ಯರು ಮತ್ತು ಜಿಲ್ಲಾಡಳಿತಕ್ಕೆ ಸವಾಲಾಗಿದೆ.

ABOUT THE AUTHOR

...view details