ಹುಬ್ಬಳ್ಳಿ:ಆಸ್ತಿ ವಿಚಾರವಾಗಿ ಗ್ರಾಮ ಪಂಚಾಯತ್ ಸದಸ್ಯನನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಕಲಘಟಗಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬಗಡಗೇರಿ ಗ್ರಾಮದ ಲಿಂಗರಾಜ ಸರ್ಕಲ್ ಬಳಿ ಬುಧವಾರ ನಿಂಗಪ್ಪ ದಾಸಪ್ಪನವರನ್ನು ಆರೋಪಿಗಳು ಭೀಕರವಾಗಿ ಹತ್ಯೆಗೈದಿಗಿದ್ದರು.
ಹುಬ್ಬಳ್ಳಿ: ಆಸ್ತಿಗಾಗಿ ಗ್ರಾಮ ಪಂಚಾಯತ್ ಸದಸ್ಯನಾಗಿದ್ದ ಅಳಿಯನ ಬರ್ಬರ ಹತ್ಯೆ; ತಂದೆ, ಮಗ ಸೆರೆ - Hubli Crime news
Bagadgeri Gram Panchayath Member Murder probe: ಕೊಲೆಯಾದ 24 ಗಂಟೆಗಳೊಳಗೆ ಇಬ್ಬರು ಆರೋಪಿಗಳನ್ನು ಕಲಘಟಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು
Published : Nov 24, 2023, 1:05 PM IST
ಈ ಕುರಿತಂತೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಗಳಾದ ಮಲ್ಲಪ್ಪ ದಂಡಿನ (60) ನಾಗಪ್ಪ ದಂಡಿನ (37) ಎಂಬವರನ್ನು 24 ಗಂಟೆಯೊಳಗೆ ಬಂಧಿಸಿದ್ದಾರೆ. ಆರೋಪಿಗಳು ತಂದೆ, ಮಗನಾಗಿದ್ದು, ಆಸ್ತಿ ವಿಚಾರವಾಗಿ ಸ್ವಂತ ಅಳಿಯನನ್ನೇ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ:7 ಜನರಿಂದ ಮಲ್ಲೇಶನ ಮರ್ಡರ್, ಮೂವರ ಬಂಧನ : ಎಸ್ಪಿ ಮಿಥುನ್ ಕುಮಾರ್