ಧಾರವಾಡ: ತಮ್ಮ ಬಡಾವಣೆಯಲ್ಲಿ ತಲೆ ಎತ್ತಿರುವ ಬಾರ್ನ್ನು ಕೂಡಲೇ ಮುಚ್ಚುವಂತೆ ಆಗ್ರಹಿಸಿ ಎಂ.ಆರ್. ನಗರ ಬಡಾವಣೆಯ ಜನರು ಬೀದಿಗಿಳಿದಿದ್ದಾರೆ.
ಕೆಲ ದಿನಗಳ ಹಿಂದೆ ಈ ಬಾರ್ ತೆರೆದಾಗ ಹೋರಾಟ ಮಾಡಿ ಸ್ಥಗಿತಗೊಳಿಸಲಾಗಿತ್ತು. ಆದರೆ ನಿನ್ನೆಯಿಂದ ಮತ್ತೆ ಬಾರ್ ಆರಂಭವಾಗಿದೆ. ಇದರಿಂದ ಆಕ್ರೋಶಗೊಂಡಿರುವ ಸ್ಥಳೀಯರು ಬಾರ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಈ ಮುಂಚೆ ಜನರ ಒತ್ತಾಯಕ್ಕೆ ಮಣಿದು ಅಬಕಾರಿ ಇಲಾಖೆ ಅಧಿಕಾರಿಗಳು ಬಾರ್ ಆರಂಭಕ್ಕೆ ತಡೆಯೊಡ್ಡಿದ್ದರು. ಆದರೆ ಇದೀಗ ಬಾರ್ ಮಾಲೀಕ ಧಾರವಾಡ ಹೈಕೋರ್ಟ್‌ನಿಂದ ಅಬಕಾರಿ ಇಲಾಖೆ ಅಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ತಂದಿದ್ದು, ನಿನ್ನೆಯಿಂದ ಬಾರ್ನ್ನು ಪುನಾರಂಭಿಸಿದ್ದಾರೆ.
ಇದೇ ವೇಳೆ ಹೈಕೋರ್ಟ್ ಕಳೆದ ಬಾರಿ ಬಾರ್ ಮುಚ್ಚಿಸಿದ್ದ ಅನೇಕ ನಾಯಕರಿಗೆ ನೋಟೀಸ್ ಕೂಡ ನೀಡಿದೆ. ಈ ಬಗ್ಗೆ ಏನೇ ತಕರಾರುಗಳಿದ್ದರೂ ಕೋರ್ಟ್ ಮುಂದೆ ಪ್ರಸ್ತಾಪ ಮಾಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ ಎನ್ನಲಾಗ್ತಿದೆ.