ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಆಕ್ಸಿಜನ್, ವೆಂಟಿಲೇಟರ್ ಬೆಡ್​ಗಳು ಫುಲ್​​​: ಸಾಮಾನ್ಯ ಬೆಡ್ ಮಾತ್ರ ಖಾಲಿ - ಹುಬ್ಬಳ್ಳಿ ಕೋವಿಡ್​ ನ್ಯೂಸ್

ಸೋಂಕು ಉಲ್ಭಣಗೊಳ್ಳುತ್ತಿದ್ದು, ಬೆಡ್​, ಆಕ್ಸಿಜನ್​, ವೆಂಟಿಲೇಟರ್ ಸಮಸ್ಯೆ ಹಲವೆಡೆ ಉದ್ಭವಿಸಿದೆ. ಕಿಮ್ಸ್​​ನಲ್ಲಿರುವ ಆಕ್ಸಿಜನ್ ಹಾಗೂ ವೆಂಟಿಲೇಟರ್ ಬೆಡ್​ಗಳೆಲ್ಲ ಫುಲ್ ಆಗಿವೆ‌. ಕೇವಲ ಸಾಮಾನ್ಯ ಬೆಡ್​ಗಳು ಮಾತ್ರ ಖಾಲಿ ಉಳಿದುಕೊಂಡಿವೆ.

availability of beds
ಬೆಡ್​ ವ್ಯವಸ್ಥೆ

By

Published : May 14, 2021, 11:20 AM IST

ಹುಬ್ಬಳ್ಳಿ: ದೇಶದಲ್ಲಿ ಕೋವಿಡ್​ ಎರಡನೇ ಅಲೆಯ ಭೀಕರತೆ ದಿನಕಳೆದಂತೆ ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ. ಮಹಾಮಾರಿ ಹೊಡೆತಕ್ಕೆ ಸಿಲುಕಿರುವ ಜನರು ಬೆಡ್, ಆಕ್ಸಿಜನ್ ಸಿಗದೆ ರಸ್ತೆಯಲ್ಲೇ ಸಾವನ್ನಪ್ಪಿರುವ ಅದೆಷ್ಟೋ ನಿದರ್ಶನಗಳು ಕಣ್ಣ ಮುಂದೆ ಇವೆ. ಉತ್ತರ ಕರ್ನಾಟಕ ಭಾಗದ ಸಂಜೀವಿನಿ‌ ಎನಿಸಿಕೊಂಡಿರುವ ಕಿಮ್ಸ್ ‌ಕೂಡ ಈಗ ಬೆಡ್​ ಸಮಸ್ಯೆ ಎದುರಿಸುತ್ತಿದೆ.

ಕಿಮ್ಸ್​​ ಆಸ್ಪತ್ರೆಯ ಬೆಡ್​ ವ್ಯವಸ್ಥೆ ಕುರಿತು ಪ್ರತಿಕ್ರಿಯೆ

ಹೌದು, ಉತ್ತರ ಕರ್ನಾಟಕ ಭಾಗದ ಜನರ ಪಾಲಿನ ಸಂಜೀವಿನಿ ಎಂದೇ ಕರೆಯಿಸಿಕೊಳ್ಳುವ ಕಿಮ್ಸ್ ಆಸ್ಪತ್ರೆಯಲ್ಲೇ ಇದೀಗ ವೆಂಟಿಲೇಟರ್​​, ಆಕ್ಸಿಜನ್​ ಬೆಡ್​​ ಸಮಸ್ಯೆ ತಲೆದೋರಿದೆ. ಕಳೆದ ವರ್ಷ ಫ್ಲಾಸ್ಮಾ ಥೆರಪಿ ಹಾಗೂ ಇನ್ನಿತರೆ ಸೌಕರ್ಯಗಳ ಐಸಿಎಂಆರ್​​ನಿಂದಲೇ ಆಸ್ಪತ್ರೆ ಮೆಚ್ಚುಗೆ ಪಡೆದಿತ್ತು. ಆದ್ರೀಗ ಆಕ್ಸಿಜನ್​​ ಬೆಡ್​ ಸಮಸ್ಯೆ ಎದುರಾಗಿದೆ.

ಈ ಬಾರಿ ರಾಜ್ಯದಲ್ಲಿ ಆಕ್ಸಿಜನ್ ಅಭಾವ ಸೃಷ್ಟಿಯಾಗಿದೆ. ಆದ್ರೆ ಹುಬ್ಬಳ್ಳಿಯ ಕಿಮ್ಸ್​​​ನಲ್ಲಿ ಮಾತ್ರ ಸುಮಾರು 40 ಕಿಲೋ ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿದೆ. ಅಲ್ಲದೇ ಧಾರವಾಡ ಜಿಲ್ಲಾಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 20 ಕಿಲೋ ಲೀಟರ್ ಸಾಮರ್ಥ್ಯದ ಆಕ್ಸಿಜನ್ ವ್ಯವಸ್ಥೆ ಇದೆ. ಕಿಮ್ಸ್​ನ ಆಕ್ಸಿಜನ್ ಬರೋಬ್ಬರಿ 1,200 ಬೆಡ್​​ಗಳಿಗೆ ಒದಗಿಸಬಹುದಾಗಿದೆ. ಸದ್ಯ ಕಿಮ್ಸ್ ಹಾಗೂ ಧಾರವಾಡದಲ್ಲಿ ಆಕ್ಸಿಜನ್ ಅಭಾವ ಸೃಷ್ಟಿಯಾಗಿಲ್ಲ. ಪ್ರತಿನಿತ್ಯ 250ರಿಂದ 280 ಪ್ರಕರಣಗಳು ದಾಖಲಾಗುತ್ತಿದ್ದರೂ 200ಕ್ಕಿಂತ ಹೆಚ್ಚಿನ ಜನರು ಚೇತರಿಸಿಕೊಂಡು ಡಿಸ್ಚಾರ್ಜ್​ ಆಗುತ್ತಿದ್ದಾರೆ. ಹೀಗಾಗಿ ಕೇವಲ 30 ಪ್ರತಿಶತ ರೋಗಿಗಳು ಮಾತ್ರ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುತ್ತಿದ್ದು, ಅವರಿಗೆ ನೀಡಬೇಕಾದ ವೆಂಟಿಲೇಟರ್ ಹಾಗೂ ಆಕ್ಸಿಜನ್ ಸೌಲಭ್ಯ ನೀಡುತ್ತಿದ್ದೇವೆ. ಆದ್ರೆ ಸದ್ಯ ಆಕ್ಸಿಜನ್​ ಬೆಡ್​ಗಳೆಲ್ಲವೂ ಫುಲ್​ ಆಗಿದ್ದು, ಸೀಂಕಿತರ ಸಂಖ್ಯೆ ಗಣನೀಯವಾಗಿ ಏರಿದರೆ ಸಮಸ್ಯೆ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ ಕಿಮ್ಸ್ ನಿರ್ದೇಶಕರು.

ಕಿಮ್ಸ್​​ನಲ್ಲಿರುವ ಆಕ್ಸಿಜನ್ ಹಾಗೂ ವೆಂಟಿಲೇಟರ್ ಬೆಡ್​ಗಳು ಫುಲ್ ಆಗಿವೆ‌. ಕೇವಲ ಸಾಮಾನ್ಯ ಬೆಡ್​ಗಳು ಮಾತ್ರ ಖಾಲಿ ಉಳಿದುಕೊಂಡಿವೆ. ಈ ಪರಿಸ್ಥಿತಿ ಕಿಮ್ಸ್​​​ನಲ್ಲಿ ಮಾತ್ರವಲ್ಲ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲೂ ಇದೆ. ಆಕ್ಸಿಜನ್ ಹಾಗೂ ವೆಂಟಿಲೇಟರ್ ಬೆಡ್​ಗಳಿಗೆ ಭಾರಿ ಬೇಡಿಕೆ ಇದೆ.

ಕಳೆದ ವರ್ಷದಂತೆ ಈ ವರ್ಷವೂ ಅಕ್ಕಪಕ್ಕದ ಜಿಲ್ಲೆಯಲ್ಲಿ ಕೊರೊನಾಗೆ ತುತ್ತಾಗಿರುವ ಗಂಭೀರ ಸ್ವರೂಪದ ಪ್ರಕರಣಗಳನ್ನು ಕೂಡ ಕಿಮ್ಸ್​ಗೆ ಅಡ್ಮಿಟ್ ಮಾಡಿಕೊಳ್ಳಲಾಗುತ್ತಿದೆ. ಕೇವಲ ಧಾರವಾಡ ಜಿಲ್ಲೆಯಷ್ಟೇ ಅಲ್ಲದೇ ಗದಗ, ಹಾವೇರಿ ಜಿಲ್ಲೆಯ ರೋಗಿಗಳಿಗೂ ಕೂಡ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಕಿಮ್ಸ್​​ನಲ್ಲಿ ಬೆಡ್​ಗಳ ಕೊರತೆ ಕಂಡುಬರುತ್ತಿದೆ. ಈ ಸಮಸ್ಯೆ ಸರಿಪಡಿಸಲು ಮತ್ತಷ್ಟು ಬೆಡ್​​ಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೂಕ್ತ ಬೆಡ್​​ ವ್ಯವಸ್ಥೆ ಇದೆಯೇ?

ಒಟ್ಟಿನಲ್ಲಿ ಉತ್ತರ ಕರ್ನಾಟಕ ಜನರ ಪಾಲಿನ ಸಂಜೀವಿನಿ ಆಗಿರುವ ಕಿಮ್ಸ್ ಆಸ್ಪತ್ರೆಯಲ್ಲೂ ಬೆಡ್ ಕೊರತೆ ಕಂಡು ಬರುತ್ತಿದೆ. ಅದರ ಜತೆಗೆ ಪ್ರತಿದಿನ 1000-2000 ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು, ರೆಮಿಡಿಸಿವಿರ್ ಔಷಧಿಯ ಕೊರತೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದ್ರೆ ವಾಸ್ತವವಾಗಿ ಔಷಧಿ‌ ಕೊರತೆ ಇದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮ ತಗೆದುಕೊಳ್ಳಬೇಕಿದೆ.

ABOUT THE AUTHOR

...view details