ಕರ್ನಾಟಕ

karnataka

ETV Bharat / state

ಲಸಿಕೆ ಬಗ್ಗೆ ತಕರಾರು.. ವ್ಯಾಕ್ಸಿನ್ ಹಾಕುತ್ತಿದ್ದ ಎಎನ್ಎಂಐ ಸಿಬ್ಬಂದಿ ಮೇಲೆ ಹಲ್ಲೆ..

ಕೋವಿಡ್ ಸಂದಿಗ್ಧ ಸಮಯದಲ್ಲಿಯೂ ಕೂಡ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಸಿಬ್ಬಂದಿ ಮೇಲೆ ಈ ರೀತಿಯ ದೌರ್ಜನ್ಯ ಸರಿಯಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ..

Attack on ANMI staff in Hubli
ವ್ಯಾಕ್ಸಿನ್ ಹಾಕುತ್ತಿದ್ದ ಎಎನ್ಎಂಐ ಸಿಬ್ಬಂದಿ ಮೇಲೆ ಹಲ್ಲೆ

By

Published : Sep 17, 2021, 6:41 PM IST

Updated : Sep 17, 2021, 10:43 PM IST

ಹುಬ್ಬಳ್ಳಿ :ನಗರದ ನ್ಯೂ ಇಂಗ್ಲಿಷ್ ಸ್ಕೂಲ್​ನಲ್ಲಿ ವ್ಯಾಕ್ಸಿನ್ ಹಾಕುತ್ತಿದ್ದ ಎಎನ್ಎಂಐ ಸಿಬ್ಬಂದಿ ನಂದಿನಿ ಚುಂಚ ಎಂಬುವರ‌ ಮೇಲೆ ಲಸಿಕೆ ವಿಚಾರವಾಗಿ ಮಹಿಳೆಯೊಬ್ಬರು ಹಲ್ಲೆ ಮಾಡಿದ್ದಾರೆ.

ಜಿಲ್ಲಾಡಳಿತ 85,000 ವ್ಯಾಕ್ಸಿನ್ ಹಾಕುವ ಗುರಿ ಹೊಂದಿದೆ. ಇದಕ್ಕಾಗಿ 416 ತಂಡಗಳನ್ನು ಮಾಡಿ ಅಭಿಯಾನಕ್ಕೆ ಚಾಲನೆ ನೀಡಿದೆ. ಆದರೆ, ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಜೀವಕ್ಕೆ ಮಾತ್ರ ಯಾವುದೇ ಬೆಲೆ ಇಲ್ಲದಂತಾಗಿದೆ.

ವ್ಯಾಕ್ಸಿನ್ ಹಾಕುತ್ತಿದ್ದ ಎಎನ್ಎಂಐ ಸಿಬ್ಬಂದಿ ಮೇಲೆ ಹಲ್ಲೆ

ವ್ಯಾಕ್ಸಿನ್ ವಿಷಯಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ. ಅಷ್ಟಕ್ಕೆ ಮಹಿಳೆಯೊಬ್ಬರು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದಾರೆ. ಕರ್ತವ್ಯದಲ್ಲಿದ್ದ ಸಿಬ್ಬಂದಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಕಸಬಾ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಯಶವಂತ ಮದಿನವರ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಕೋವಿಡ್ ಸಂದಿಗ್ಧ ಸಮಯದಲ್ಲಿಯೂ ಕೂಡ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಸಿಬ್ಬಂದಿ ಮೇಲೆ ಈ ರೀತಿಯ ದೌರ್ಜನ್ಯ ಸರಿಯಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಓದಿ:ಪ್ರಧಾನಿ ಜನ್ಮದಿನವನ್ನು 'ರಾಷ್ಟ್ರೀಯ ನಿರುದ್ಯೋಗ' ದಿನವಾಗಿ ಆಚರಿಸಿದ ಯುವ ಕಾಂಗ್ರೆಸ್

Last Updated : Sep 17, 2021, 10:43 PM IST

ABOUT THE AUTHOR

...view details