ಹುಬ್ಬಳ್ಳಿ: ಉಪಚುನಾವಣೆಗಳನ್ನುೂ ಪಕ್ಷ ಗಂಭೀರವಾಗಿ ತೆಗೆದುಕೊಂಡು ಚುನಾವಣೆ ಮಾಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ರಮೇಶ ಜಾರಕಿಹೊಳಿ ಹೆಸರು ಕೇಳಿದ್ದಕ್ಕೆ ಸಿಡಿಮಿಗೊಂಡ ಮಾಜಿ ಸಿಎಂ ಸಿದ್ದರಾಮಯ್ಯ - kannada news
ಈಗ ಯಾಕೆ ಜಾರಕಿಹೊಳಿ ವಿಚಾರ ನಾನು ಮಾತನಾಡುವುದಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳ ಮೇಲೆ ಸಿಡಿಮಿಡಿಗೊಂಡ ಮಾಜಿ ಸಿಎಂ ಸಿದ್ದರಾಮಯ್ಯ.
ರಮೇಶ ಜಾರಕಿಹೊಳಿ ಹೆಸರು ಹೇಳುತ್ತಿದ್ದಂತೆ ಸಿದ್ದು ಪುಲ್ ಗರಂ
ನಗರದ ಖಾಸಗಿ ಹೋಟೆಲ್‌ನಲ್ಲಿ ಕುಂದಗೋಳ ವಿಧಾನ ಸಭೆಯ ಟಿಕೆಟ್ ಕುರಿತಂತೆ ಅಸಮಾಧಾನಗೊಂಡ ಮುಖಂಡರ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಚುನಾವಣೆ ಕುರಿತು ಮಾತ್ರ ಮಾತನಾಡುತ್ತೇನೆ. ಈಗ ಯಾಕೆ ಜಾರಕಿಹೊಳಿ ವಿಚಾರ ನಾನು ಮಾತನಾಡುವುದಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳ ಮೇಲೆ ಸಿಡಿಮಿಡಿಗೊಂಡರು.
ರಮೇಶ್ ಜಾರಕಿಹೊಳಿ ಹೆಸರು ಕೇಳುತ್ತಿದ್ದಂತೆಯೇ ಗರಂ ಆಗಿ ಜಾರಕಿಹೊಳಿಗೂ ಇದಕ್ಕೂ ಏನು ಸಂಬಂಧ ಎಂದು ಹರಿಯ್ದಾದರು.