ಹುಬ್ಬಳ್ಳಿ: ಸಣ್ಣ ನೀರಾವರಿ ಇಲಾಖೆಯ ಇಇ ದೇವರಾಜ ಕೆ. ಶಿಗ್ಗಾಂವಿ ಅವರ ನಿವಾಸ ಮತ್ತು ತಾಯಿ ಹಾಗೂ ಮಾವನ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ಇಂದು ಬೆಳಗ್ಗೆ ಏಕಕಾಲಕ್ಕೆ ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದಷ್ಟು ಚಿನ್ನಾಭರಣ ಹಾಗೂ ಆಸ್ತಿ ಪತ್ತೆಯಾಗುತ್ತಿವೆ.
ಇಇ ಮನೆ ಮೇಲೆ ಎಸಿಬಿ ದಾಳಿ: ಭ್ರಷ್ಟ ಅಧಿಕಾರಿಯ ಖಜಾನೆಯಲ್ಲಿ ತುಂಬಿ ತುಳುಕುತ್ತಿದೆ ಚಿನ್ನಾಭರಣ! - scb
ಇಇ ದೇವರಾಜ ಕೆ. ಶಿಗ್ಗಾಂವಿ ಅವರ ನಿವಾಸ ಹಾಗೂ ಅವರ ಸಂಬಂಧಿಕರ ಮನೆ ಹಾಗೂ ಕಚೇರಿ ಮೇಲೆ ಏಕಾ ಏಕಿ ಎಸಿಬಿ ಅಧಿಕಾರಿಗಗಳು ದಾಳಿ ನಡೆಸಿದ್ದಾರೆ.
ಭ್ರಷ್ಟ ಅಧಿಕಾರಿಯ ಖಜಾನೆಯಲ್ಲಿ ತುಂಬಿ ತುಳುಕುತ್ತಿದೆ ಚಿನ್ನಾಭರಣ!
ದೇವರಾಜ್ ಅವರ ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಲಾಕರ್ನಲ್ಲಿ 56.5 ಲಕ್ಷ ಹಣ ಹಾಗೂ 400 ಗ್ರಾಂ ಬಂಗಾರದ ಆಭರಣಗಳು, ಆಸ್ತಿ ಪತ್ರಗಳು ಪತ್ತೆಯಾದರೆ ಇತ್ತ ಮಾವ ಭೀಮಪ್ಪ ಗಾಡಿವಡ್ಡರ ಅವರ ಲಾಕರ್ ನಲ್ಲಿ ಅಪಾರ ಪ್ರಮಾಣ ಬಂಗಾರ ಹಾಗೂ ಹಣ ಪತ್ತೆಯಾಗಿದೆ. ಹಾಗೆ ಅಳಿಯ ಹಾಗೂ ಪತ್ನಿ ವರ್ಷಾ ಹೆಸರಿನಲ್ಲಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ 30 ಲಕ್ಷ ರೂಪಾಯಿ ಡಿಪಾಸಿಟ್ ಹಣ ಇಡಲಾಗಿದೆ.
ವಶಪಡಿಸಿಕೊಂಡ ಸ್ವತ್ತುಗಳ ಎಣಿಕೆ ನಡೆಸಲಾಗುತ್ತಿದ್ದು, ತನಿಖೆ ನಡೆಸಲಾಗುತ್ತಿದೆ.