ಹುಬ್ಬಳ್ಳಿ:ಹಣದ ವಿಷಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ವಿಷ ಸೇವಿಸಿದ್ದೇನೆ ಎಂದು ಹೇಳಿಕೊಂಡು ಪೊಲೀಸ್ ಠಾಣೆಗೆ ಬಂದಿರುವ ಘಟನೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ವಿಷ ಸೇವಿಸಿದ್ದೇನೆಂದು ಪೊಲೀಸ್ ಠಾಣೆಗೆ ಆಗಮಿಸಿ ಹೈಡ್ರಾಮ ಮಾಡಿದ ವ್ಯಕ್ತಿ ಲೋಹಿಯಾ ನಗರದ ಪರಶುರಾಮ ಬದ್ದಿ ಎಂಬಾತ ಪೊಲೀಸ್ ಠಾಣೆಗೆ ವಿಷದ ಬಾಟಲಿ ತೆಗೆದುಕೊಂಡು ಬಂದು ವಿಷ ಸೇವಿಸಿದ್ದೇನೆ ಎಂದು ಪೊಲೀಸ್ ಸಿಬ್ಬಂದಿಗಳಿಗೆ ಹೇಳಿ ಆತಂಕ ಸೃಷ್ಟಿ ಮಾಡಿದ್ದಾನೆ.
ಅಲ್ಲದೇ ಸಂತೋಷ ಕಟಾವೇ ಎಂಬುವವರು ಎರಡು ಲಕ್ಷ ಹಣವನ್ನು ನೀಡದೇ ವಂಚಿಸುತ್ತಿದ್ದಾನೆ ಎಂದು ವಿಷ ಸೇವನೆ ಮಾಡಿರುವುದಾಗಿ ಪರಶುರಾಮ ಬದ್ದಿ ಹೇಳಿಕೊಂಡಿದ್ದಾನೆ. ನನಗೆ ಪೊಲೀಸರು ನ್ಯಾಯ ಕೊಡಿಸಬೇಕೆಂದು ಎಂದು ಪರಶುರಾಮ ಬದ್ದಿ ಬೇಡಿಕೊಂಡಿದ್ದಾನೆ.
ವಿಷ ಸೇವಿಸಿದ ವ್ಯಕ್ತಿಯ ಹೈಡ್ರಾಮಕ್ಕೆ ಬೇಸತ್ತ ಪೋಲಿಸರು ವ್ಯಕ್ತಿಯನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದರು. ವ್ಯಕ್ತಿಯು ವಿಷ ಕುಡಿದಿದ್ದು, ನಿಜವಾ ಅಥವಾ ಸುಳ್ಳು ಎಂಬುದು ಚಿಕಿತ್ಸೆ ನಂತರ ಗೊತ್ತಾಗಲಿದೆ.
ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.