ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಗಣೇಶ ನಿಮಜ್ಜನ ವೇಳೆ ಐದು ಕಡೆ ಚಾಕು ಇರಿತ: 9 ಜನ ಆರೋಪಿಗಳ ಬಂಧನ - ಕಿಮ್ಸ್

ಹುಬ್ಬಳ್ಳಿ ಜಿಲ್ಲೆಯ ಗಣೇಶ ನಿಮಜ್ಜನ ವೇಳೆ ಐದು ಕಡೆ ನಡೆದ ಚಾಕು ಇರಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ 9 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಗಣೇಶ ನಿಮಜ್ಜನ ವೇಳೆ ಐದು ಕಡೆ ಚಾಕು ಇರಿತ ; ಇಲ್ಲಿಯವರೆಗೆ 9 ಜನ ಆರೋಪಿಗಳ ಬಂಧನ..

By

Published : Sep 15, 2019, 8:02 PM IST

ಹುಬ್ಬಳ್ಳಿ;ಜಿಲ್ಲೆಯ ಗಣೇಶ ನಿಮಜ್ಜನ ವೇಳೆ ಐದು ಕಡೆ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 9 ಜನ ಆರೋಪಿಗಳನ್ನು ಬಂಧಿಸಲಾಗಿದೆ. ದುರ್ಗದ ಬೈಲ್​​ನಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಆಲ್ತಾಪ್ ಕಲಾದಗಿ (22), ಇರ್ಫಾನ್ ಕಲಾದಗಿ (22), ಲಿಯಾಖಿತ್ ಅಲಿ ಬಿಸ್ತಿ, ಜಾಫರ್ ಸಾಧಿಕ್ ಬಂಧಿತರು. ಇವರೆಲ್ಲರೂ ಅಂಬೇಡ್ಕರ್ ಕಾಲೋನಿ ಹಾಗೂ ಕೇಶ್ವಾಪುರದ ನಿವಾಸಿಗಳಾಗಿದ್ದಾರೆ.

ಇನ್ನು ಮೇದಾರ್ ಓಣಿಯಲ್ಲಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಅಮೃತ ಕಬಾಡೆ(21), ಅಮೃತ ತಂದೆ, ಅನಂತಸಾ ಬಾಂಡೆಗೆ ಬಂಧಿತರು. ಇವರು ನೇಕಾರ ನಗರದ ನಿವಾಸಿಗಳಾಗಿದ್ದಾರೆ.

ನಿನ್ನೆ ಅಜ್ಮೀರ ನಗರದಲ್ಲಿ ನಡೆದ ಚಾಕು ಇರಿತ ಪ್ರಕರಣ ಸಂಬಂಧ ಪ್ರಶಾಂತ ಬಂಕಾಪುರ ಎಂಬಾತನನ್ನ ಬಂಧಿಸಿಸಲಾಗಿದೆ. ದಾಜೀಬಾನ್ ಪೇಟೆಯಲ್ಲಿ ನಡೆದ ಚಾಕು ಇರಿತ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ರವಿ ಕಾಟಗಾರ (29), ರಾಹುಲ್ ಬಾಂಡಗೆ (21) ಬಂಧಿತರು. ಇವರು ನೇಕಾರ ನಗರದ ನಿವಾಸಿಗಳು.

ಗಣೇಶ ನಿಮಜ್ಜನ ವೇಳೆ ಐದು ಕಡೆ ಚಾಕು ಇರಿತ: ಇಲ್ಲಿಯವರೆಗೆ 9 ಜನ ಆರೋಪಿಗಳ ಬಂಧನ
ದುರ್ಗದ ಬೈಲ್, ಹರ್ಷ ಕಾಂಪ್ಲೆಕ್ಸ್, ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಹಾಗೂ ಹಳೇ ಹುಬ್ಬಳ್ಳಿ ಹಾಗೂ ದಾಜೀಬಾನ್ ಪೇಟೆಯಲ್ಲಿ ಚಾಕು ಇರಿತವಾಗಿತ್ತು. ಪ್ರತ್ಯೇಕ ಪ್ರಕರಣಗಳಲ್ಲಿ ಓರ್ವ ನರ್ಸಿಂಗ್ ವಿದ್ಯಾರ್ಥಿ ಬಸವರಾಜ ವಿರೇಶ ಶಿವುರ ಎಂಬಾತ ಚಾಕು ಇರಿತಕ್ಕೆ ಬಲಿಯಾಗಿದ್ದ. ಮಹಾಂತೇಶ ಬಸವನಗೌಡ ಹೊಸಮನಿ (17), ವಿನಾಯಕ ಬಝಂತ್ರಿ(21), ಮಂಜುನಾಥ ರಾಜು ಗೋಕಾಕ (25), ನಾಗರಾಜ ಕುಂಬಾರ (33), ಪ್ರಕಾಶ ಕಠಾರೆ (32) ಎಂಬುವರು ಗಂಭೀರ ಗಾಯಗೊಂಡಿದ್ದರು. ಗಾಯಗಳುಗಳನ್ನ ಕಿಮ್ಸ್​​​ಗೆ ದಾಖಲಿಸಲಾಗಿದೆ.

ಮೇಲ್ನೋಟಕ್ಕೆ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿಯಲಾಗಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ. ಈ ಸಂಬಂಧ ಉಪನಗರ ಹಾಗೂ ಶಹರ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ABOUT THE AUTHOR

...view details