ದಾವಣಗೆರೆ :ಮುಂಬರುವ ಎಲ್ಲಾ ಚುನಾವಣೆಗಳಿಗೆ ತಯಾರು ನಡೆಯುತ್ತದೆ. 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ವಿಚಾರವಾಗಿ ಚರ್ಚಿಸಲಾಗುತ್ತದೆ. ಬಿಜೆಪಿ ಅಧಿಕಾರ ವಹಿಸಿಕೊಂಡ ಮರುದಿನದಿಂದಲೇ ಎಲೆಕ್ಷನ್ಗೆ ಸಿದ್ಧತೆ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ 2023ರ ವಿಧಾನಪರಿಷತ್ ಚುನಾವಣೆ, ಜಿಲ್ಲಾ, ತಾಲೂಕು ಪಂಚಾಯತ್ ಬಗ್ಗೆ ಚರ್ಚೆ ನಡೆಯುತ್ತದೆ. ಯಡಿಯೂರಪ್ಪನವರು ನಮ್ಮ ಪಕ್ಷದ ಹಿರಿಯ ನಾಯಕರು, ಅವರ ರಾಜ್ಯ ಪ್ರವಾಸದಿಂದ ನಮಗೆ ಅನುಕೂಲವಾಗುತ್ತದೆ.
ಬಿಎಸ್‌ವೈ ಮಾರ್ಗದರ್ಶನದಲ್ಲಿ ಸಲಹೆ,ಸೂಚನೆ ಪಡೆದುಕೊಂಡು ಪಕ್ಷವನ್ನು ಬಲ ಪಡಿಸುತ್ತೇವೆ. ಯಡಿಯೂರಪ್ಪ ಮೇಲೆ ಅಪಸ್ವರವಾಗಲಿ, ಬಿನ್ನಭಿಪ್ರಾಯವಾಗಲಿ ಯಾವತ್ತು ಬರೋಲ್ಲ. ಎಲ್ಲರೂ ಒಟ್ಟಿಗೆ ಹೋದರೆ ಉಜ್ವಲ ಭವಿಷ್ಯ ಇದೆ ಎಂದರು.