ಕರ್ನಾಟಕ

karnataka

ETV Bharat / state

ಬಾರದ ಭದ್ರಾ ಮೇಲ್ದಂಡೆ ನೀರು... ಜಗಳೂರಿನಲ್ಲಿ ಮತದಾನ ಬಹಿಷ್ಕಾರ

ನೀರಾವರಿ ಯೋಜನೆ ಒದಗಿಸದ್ದಕ್ಕೆ ಆಕ್ರೋಶಗೊಂಡಿರುವ ಜಗಳೂರು ತಾಲೂಕಿನ ಕೆಲವು ಹಳ್ಳಿಗಳ ಜನ ಮತದಾನ ಬಹಿಷ್ಕರಿಸಲು ಮುಂದಾಗಿದ್ದಾರೆ.

ಮತದಾನ ಬಹಿಷ್ಕಾರ

By

Published : Apr 17, 2019, 12:45 PM IST

ದಾವಣಗೆರೆ: ಭದ್ರಾ ಮೇಲ್ದಂಡೆ ಯೋಜನೆಯಡಿ ಇದುವರೆಗೆ ನೀರಾವರಿ ಒದಗಿಸದ್ದಕ್ಕೆ ಆಕ್ರೋಶಗೊಂಡಿರುವ ಜಗಳೂರು ತಾಲೂಕಿನ ಕೆಲವು ಹಳ್ಳಿಗಳ ಜನರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿದರಲ್ಲದೆ ಈ ಸಂಬಂಧ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಲ್ಲದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಗೇನಹಳ್ಳಿ, ಬೆಣ್ಣೆಹಳ್ಳಿ, ಬಸಪ್ಪನಹಟ್ಟಿ, ಗೌರಮ್ಮನಹಳ್ಳಿ ಕಲ್ಲದೇವಪುರ ಗ್ರಾಮಸ್ಥರು ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸದಿರಲು ತೀರ್ಮಾನಿಸಿದ್ದಾರೆ.

ಮತದಾನ ಬಹಿಷ್ಕಾರ

ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹರಿಸುತ್ತೇವೆ ಎಂಬ ಭರವಸೆಯನ್ನು ಪ್ರತಿ ಚುನಾವಣೆಯಲ್ಲಿಯೂ ಅಭ್ಯರ್ಥಿಗಳು ನೀಡುತ್ತಾ ಬಂದಿದ್ದಾರೆ. ಆದರೆ ಚುನಾವಣೆ ಮುಗಿದ ಯಾರು ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಬೆಳೆದ ಬೆಳೆ ನೀರಿಲ್ಲದೇ ಒಣಗುತ್ತಿವೆ. ಹಾಗಾಗಿ ಮತದಾನದಿಂದ ದೂರ ಉಳಿಯುವುದಾಗಿ ಜನ ನಿರ್ಧರಿಸಿದ್ದಾರೆ.

ABOUT THE AUTHOR

...view details