ಹರಿಹರ: ತುಂಗಭದ್ರ ನದಿಪಾತ್ರದಲ್ಲಿ ಸಮಾನ ಮನಸ್ಕರ ಗೆಳೆಯರ ಬಳಗದಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಭಿಯಾನಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಹರಿಹರದ ತುಂಗಭದ್ರ ನದಿ ದಡದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನದಲ್ಲಿ ಕಾರ್ತಿಕ ಮಾಸದ ಚಳಿಯನ್ನೂ ಲೆಕ್ಕಿಸದೇ, ಕುಟುಂಬ ಸಮೇತರಾಗಿ ಮಕ್ಕಳೊಂದಿಗೆ ಭಾಗವಹಿಸಿರೋದು ವಿಶೇಷ.
ನದಿ ಪಾತ್ರ ಸ್ವಚ್ಛತೆಗೆ ಮುಂದಾದ ಸ್ವಯಂ ಸೇವಕರು.. ನದಿ ಪಾತ್ರವನ್ನು ಆವರಿಸಿಕೊಂಡು ಅಸಹ್ಯ ಮೂಡಿಸಿದ್ದ ಪೂಜಾ ಸಾಮಾಗ್ರಿಗಳು, ಬಟ್ಟೆ, ಪ್ಲಾಸ್ಟಿಕ್ ಗಿಡ ಗಂಟೆಗಳು ಹಾಗೂ ಮದ್ಯದ ಬಾಟೆಲ್ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿದರು. ಬೆಳಗ್ಗೆ 7 ರಿಂದ ಆರಂಭಗೊಂಡ ಸ್ವಚ್ಛತಾ ಕಾರ್ಯಕ್ಕೆ ಸ್ವಯಂ ಪ್ರೇರಿತವಾಗಿ ಸ್ಥಳೀಯರು ಭಾಗವಹಿದ್ದರು. ಸುಮಾರು 6 ರಿಂದ 7 ಟನ್ ಕಸವನ್ನು ನದಿ ಪಾತ್ರದಲ್ಲಿ ಸಂಗ್ರಹಿಸಿ ನಗರಸಭೆ ಸಿಬ್ಬಂದಿ ಸಹಕಾರದೊಂದಿಗೆ ಸ್ವಚ್ಛಗೊಳಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಮಾಜಿ ಶಾಸಕ ಬಿ ಪಿ ಹರೀಶ್, ನಗರಸಭಾ ಪೌರಾಯುಕ್ತೆ ಎಸ್. ಲಕ್ಷ್ಮಿ, ನಗರಸಭೆ ಸದಸ್ಯರುಗಳು, ಸಿಬ್ಬಂದಿ, ಪೌರಾಕಾರ್ಮಿಕರು, ಸಂಘ-ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.