ಹರಿಹರ (ದಾವಣಗೆರೆ): ವರುಣನ ಅಬ್ಬರಕ್ಕೆ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಭದ್ರಾ ನದಿಯ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗುತ್ತಿದ್ದು, ತುಂಗಭದ್ರಾ ನದಿಯಲ್ಲಿ ಅಧಿಕ ಪ್ರಮಾಣದ ನೀರು ಹರಿಯುತ್ತಿದೆ.
ತುಂಬಿದ ತುಂಗಭದ್ರಾ ... ರೈತರ ಮೊಗದಲ್ಲಿ ಸಂತಸ - Harihara Tahsildar
ದಾವಣಗೆರೆಯ ತುಂಗಭದ್ರಾ ನದಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದೊಂದು ತಿಂಗಳ ಹಿಂದೆ ಬತ್ತಿ ಹೊಗಿದ್ದ ನದಿ ಈಗ ತುಂಬಿ ಹರಿಯುತ್ತಿದ್ದು, ಜಿಲ್ಲೆಯ ರೈತರ ಮೊಗದಲ್ಲಿ ಸಂತಸ ತರಿಸಿದೆ.
ಜೀವನಾಡಿ ತುಂಗಭದ್ರಾ ಹರಿವಲ್ಲಿ ಹೆಚ್ಚಳ...ನದಿ ಪಾತ್ರದ ಜನರಿಗೆ ಎಚ್ಚರಿಕೆ..!
ಕಳೆದ ಕೆಲ ದಿನಗಳ ಹಿಂದೆ ಹರಿಹರ ತುಂಗಭದ್ರಾ ನದಿಯಲ್ಲಿ ನೀರು ಇಲ್ಲದೇ ನದಿ ಪಾತ್ರದ ನಗರ ಮತ್ತು ಹಳ್ಳಿಗಳ ಜನರು ಜಮೀನುಗಳಿಗೆ ನೀರು ಹಾಯಿಸಲು ಕಷ್ಟಪಡುತ್ತಿದ್ದರು. ಇದೀಗ ಅಧಿಕ ಮಳೆ ಬರುತ್ತಿರುವುದರಿಂದ ನದಿಯಲ್ಲಿನ ನೀರಿನ ಮಟ್ಟ ಹೆಚ್ಚಳವಾಗಿದ್ದು, ಜನರಲ್ಲಿ ಸಂತಸ ತಂದಿದೆ.
ಅಲ್ಲದೆ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, ನದಿ ಪಾತ್ರದ ಜನರಿಗೆ ಸುರಕ್ಷಿತವಾಗಿರುವಂತೆ ತಹಶೀಲ್ದಾರರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.