ಕರ್ನಾಟಕ

karnataka

ETV Bharat / state

ರೈಲ್ವೆ ಸಚಿವರನ್ನು ನೋಡಲು ಮುಗಿಬಿದ್ದ 'ಬೆಣ್ಣೆ ಮಂದಿ': ನಿಯಂತ್ರಿಸಲು ಪೊಲೀಸರ ಹರಸಾಹಸ

ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸಾರ್ವಜನಿಕರು ಮುಗಿಬಿದ್ದಿದ್ದು, ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟ ಘಟನೆ ನಡೆಯಿತು.

ರೈಲ್ವೇ ಸಚಿವರನ್ನು ನೋಡಲು ಮುಗಿಬಿದ್ದ 'ಬೆಣ್ಣೆ ಮಂದಿ'

By

Published : Oct 17, 2019, 8:47 PM IST

ದಾವಣಗೆರೆ:ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸಾರ್ವಜನಿಕರು ಮುಗಿಬಿದ್ದರು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ರೈಲ್ವೇ ಸಚಿವರನ್ನು ನೋಡಲು ಮುಗಿಬಿದ್ದ 'ಬೆಣ್ಣೆ ಮಂದಿ'

ಹೊಸಪೇಟೆಯಿಂದ ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಸುರೇಶ್​ ಅಂಗಡಿ ಅವರು ಎರಡು ಗಂಟೆ ತಡವಾಗಿ ಆಗಮಿಸಿದರು. ಈ ವೇಳೆ ಅಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಸಚಿವರು ಆಗಮಿಸುತ್ತಿದ್ದಂತೆ ಮುಗಿಬಿದ್ದರು. ಸಂಸದ ಜಿ.ಎಂ.ಸಿದ್ದೇಶ್ವರ್ ಮನವಿ ಮಾಡಿದರೂ ಕ್ಯಾರೇ ಎನ್ನಲಿಲ್ಲ. ಬಳಿಕ ಪೊಲೀಸರ ಸಹಾಯದ ಮೂಲಕ ಸಚಿವರನ್ನು ಕರೆತರಲಾಯಿತು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸುರೇಶ್​ ಅಂಗಡಿ, ದಾವಣಗೆರೆ ಜಿಲ್ಲೆಯ ರೈಲ್ವೆ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು ಎಂಬ ಭರವಸೆ ನೀಡಿದರು.

ABOUT THE AUTHOR

...view details