ಕರ್ನಾಟಕ

karnataka

By

Published : Feb 7, 2020, 2:21 PM IST

Updated : Feb 7, 2020, 3:13 PM IST

ETV Bharat / state

ಮೊಬೈಲ್ ಬಿಡಿ, ಓದಿನತ್ತ ಗಮನ ಕೊಡಿ.. ಮಕ್ಕಳಿಗೆ ನ್ಯಾ. ಎನ್ ಕೆ ಸಿದ್ದರಾಜು ಸಲಹೆ

ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್‌ ಘಟಕದ ಹಮ್ಮಿಕೊಂಡಿದ್ದ ವಿಶೇಷ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.

Special Legal Awareness Program at Harihara
ಹರಿಹರದಲ್ಲಿ ವಿಶೇಷ ಕಾನೂನು ಅರಿವು ಕಾರ್ಯಕ್ರಮ

ಹರಿಹರ:ವಿದ್ಯಾರ್ಥಿಗಳು ಮೊಬೈಲ್ ಬಳಸುವಾಗ ಧನಾತ್ಮವಾಗಿ ಬಳಸಬೇಕು ಮತ್ತು ಇಂಟರ್ನೆಟ್, ವಾಟ್ಸ್‌ಆ್ಯಪ್, ಫೇಸ್​ಬುಕ್ ಬಳಸುವಾಗಲೂ ಬಹಳಷ್ಟು ಜಾಗರೂಕತೆಯಿಂದರಬೇಕು ಎಂದು ಜೆಎಂಎಫ್‌ಸಿ ಅಪರ ಸಿವಿಲ್ ನ್ಯಾಯಾಧೀಶ ಎನ್ ಕೆ ಸಿದ್ದರಾಜು ಸಲಹೆ ನೀಡಿದರು.

ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್‌ ಘಟಕದ ಹಮ್ಮಿಕೊಂಡಿದ್ದ ವಿಶೇಷ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೊಬೈಲ್ ಬಳಕೆ ಬಿಟ್ಟು ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು. ಸಂವಿಧಾನದ ಬಗ್ಗೆ ಮತ್ತು ಅದರ ಮಹತ್ವದ ಬಗ್ಗೆ ಮಾಹಿತಿ ನೀಡಿದ ಅವರು, ಕೊನೆಯಲ್ಲಿ ಶಿಬಿರಾರ್ಥಿಗಳಿಗೆ ಭಾವೈಕ್ಯತೆ ಹಾಗೂ ಸೌಹಾರ್ದತೆಯ ಪ್ರತಿಜ್ಞಾ ವಿಧಿ ಬೋಧಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ವಕೀಲ ಮಂಜಪ್ಪ ಎಸ್. ದೊಡ್ಮನಿ ಮಾತನಾಡಿ, ಭಾರತ ಹಳ್ಳಿಗಳ ದೇಶ. ಹಾಗಾಗಿ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಬೇಕು ಎಂದರು. ಇದೇ ವೇಳೆ ಹಿರಿಯ ವಕೀಲ ನಾಗರಾಜ್ ಬಿ, ಜನನ ಮತ್ತು ಮರಣ ಪ್ರಮಾಣ ಪತ್ರ ಹೇಗೆ ಪಡೆಯಬೇಕು ಮತ್ತು ಗ್ಯಾರಂಟಿ ಹಾಗೂ ವಾರೆಂಟಿ ಎಂಬುದರ ವ್ಯತ್ಯಾಸದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.

ಭಾರತ ಸಂವಿಂಧಾನ ಹಾಗೂ ಅದರ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ವಕೀಲ ಅವರು ಗಣೇಶ್ ಮಾತನಾಡಿದ್ರೆ, ಜನ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಶ್ರೀಮತಿ ಶೈಲಶ್ರೀ ಅವರು ಮಾದಕ ವ್ಯಸನದ ಬಗ್ಗೆ ಅರವು ಮೂಡಿಸಿದರು. ಈ ವೇಳೆ ಹೆಚ್. ಹನುಮನಗೌಡ್ರು, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಪ್ರೊ. ಕೆ ಬಿ ಮಂಜುನಾಥ್ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

Last Updated : Feb 7, 2020, 3:13 PM IST

For All Latest Updates

TAGGED:

ABOUT THE AUTHOR

...view details