ದಾವಣಗೆರೆ :ಜೆಡಿಎಸ್ನ 30 ಶಾಸಕರು, ನಮ್ಮವರು 80 ಶಾಸಕರಿದ್ದರು. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ವಿ. ಆದರೆ ಅವರು ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಕೂತು ಆಡಳಿತ ನಡೆಸಿದ್ರು. ಇದರಿಂದ ಶಾಸಕರು ಬೇಸತ್ತು ಬೆಜೆಪಿಗೆ ಹೋದ್ರು. ಸರ್ಕಾರ ಬಿದ್ದೋಯಿತು. ಅವರು ಶಾಸಕರ ಅಹವಾಲು ಸರಿಯಾಗಿ ಕೇಳಿದರೆ ಸರ್ಕಾರ ಬೀಳುತ್ತಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಜಿ ಸಿಎಂ ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಕೋಟಿಗಟ್ಟಲೆ ಹಣ ನೀಡಿ ನಮ್ಮ ಶಾಸಕರನ್ನು ಖರೀದಿ ಮಾಡಿ ಅನೈತಿಕ ಸರ್ಕಾರ ಕಟ್ಟಿದ್ರು. ನಾನು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಯಡಿಯೂರಪ್ಪನವರಿಗೆ ಕೇಳುವೆ. ನಮ್ಮ ಶಾಸಕರಿಗೆ ಕೊಡಲು ಇಷ್ಟೊಂದು ಹಣ ಎಲ್ಲಿಂದ ಬಂತು ರೀ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಬಿಜೆಪಿಯವರ ಮನೆ ಹಾಳಾಗ, ಒಂದು ಮನೆ ಕಟ್ಟಿಕೊಟ್ಟಿಲ್ಲ. ನಾನು ಇದ್ದ ಲಕ್ಷಾಂತರ ಮನೆಗಳನ್ನು ರಾಜ್ಯಾದ್ಯಂತ ನಿರ್ಮಾಣ ಮಾಡಿ ಬಡವರಿಗೆ ಕೊಟ್ಟಿದ್ದೆ. ನಮ್ಮನ್ನು ಬಿಜೆಪಿಯವರು ಸಾಲಗಾರನ್ನಾಗಿ ಮಾಡಿದ್ದಾರೆ. ಹೀಗೆ ಆದರೆ ರಾಜ್ಯ ಉಳಿಯುತ್ತಾ. ಇನ್ನು 40% ಕಮಿಷನ್ ಪಡೆಯುವ ಸರ್ಕಾರ ಇದು. ಮೋದಿಯವರೇ ಏಕೆ ನಾಟಕ ಆಡ್ತೀರಿ. ಗುತ್ತಿಗೆದಾರರು ಪತ್ರ ಬರೆದು ಒಂದೂವರೆ ವರ್ಷ ಆಯಿತು. ಏನ್ ಕ್ರಮ ತೆಗೆದುಕೊಂಡಿದ್ದೀರಿ. ನೀವು ಜನ್ರೀಗೆ ಸುಳ್ಳು ಹೇಳಿದ್ದೀರಿ. ಇದು ವಚನ ಭ್ರಷ್ಟತೆಯಾಗುತ್ತದೆ ಎಂದರು.
ಮೋದಿಯವರ ಗೋರಿ ತೋಡ್ತಿವಿ ಎಂದು ನಾವು ಹೇಳಿಲ್ಲ : ಮೋದಿಯವರ ಗೋರಿ ತೋಡ್ತಿವಿ ಎಂದು ವಿರೋಧ ಪಕ್ಷದವರು ಹೇಳಿದ್ದಾರೆ ಎಂದು ಪಿಎಂ ನರೇಂದ್ರ ಮೋದಿ ಜನ್ರ ಮುಂದೆ ಸುಳ್ಳು ಹೇಳಿದ್ದಾರೆ. ನಮ್ಮ ಪಕ್ಷದವರು ಯಾರು ಈ ರೀತಿ ಹೇಳಿಕೆ ನೀಡಿಲ್ಲ. ಪ್ರಧಾನಿಯವರ ಗೋರಿ ತೋಡ್ತೀವಿ ಎಂಬ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಅವರು ಸುಳ್ಳು ಹೇಳುತ್ತಿದ್ದು, ಸುಳ್ಳೇ ಅವರ ಬಂಡವಾಳ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ದೇವೇಗೌಡ್ರ ಮನೆಯವರಿದ್ದಾರಲ್ಲ ಅವರು ಅವಕಾಶವಾದಿಗಳು : ದೇವೇಗೌಡ್ರ ಮನೆಯವರಿದ್ದಾರಲ್ಲ, ಅವರು ಅವಕಾಶವಾದಿಗಳು, ಅವರು ಜೆಡಿಎಸ್ ನವರು ಗೆದ್ದ ಎತ್ತಿನಬಾಲ ಹಿಡಿಯುವರು. ಕಡಿಮೆ ಸೀಟ್ ಪಡೆದು ಬಿಜೆಪಿಯತ್ತ ಇಲ್ಲ ಕಾಂಗ್ರೆಸ್ ಕಡೆ ಹೀಗೆ ಅವಕಾಶಕ್ಕಾಗಿ ಕಾಯುವವರು ಜೆಡಿಎಸ್‌ನವರು. ನೀವು ಜೆಡಿಎಸ್ಗೆ ಮತ ಹಾಕಿದ್ರೇ ಅದು ಬಿಜೆಪಿಗೆ ಹೋಗುತ್ತೆ. ಜೆಡಿಎಸ್ಗೆ ಮತ ಕೊಡ್ಬೇಡಿ. ಹರಿಹರದಲ್ಲಿ ಅವರ ಅಭ್ಯರ್ಥಿ ಹಾಕ್ತಾರೆ. ಯಾವುದೇ ಕಾರಣಕ್ಕೆ ಮತಗಳನ್ನು ನೀಡ್ಬೇಡಿ ಎಂದರು.
ಬಿಜೆಪಿ ಎಂದರೆ ಭ್ರಷ್ಟ ಜನತಾ ಪಾರ್ಟಿ : ಸಿದ್ದರಾಮಯ್ಯ : ಆಪರೇಷನ್ ಕಮಲ ಮಾಡಿ, ಅನೈತಿಕವಾಗಿ ಸರ್ಕಾರ ಮಾಡಿದ್ರು. ಬಿಜೆಪಿ ಎಂದರೆ ಭ್ರಷ್ಟ ಜನತಾ ಪಾರ್ಟಿ. ಭ್ರಷ್ಟಾಚಾರದಿಂದ ಹುಟ್ಟಿ ಮುಂದುವರೆಸುತ್ತಿರುವ ಪಕ್ಷ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮಾತು ಎತ್ತಿದ್ರೆ ನಾನು ಮಣ್ಣಿನ ಮಗ ಎನ್ನುತ್ತಾರೆ. ರೈತರ ಸಾಲ ಮನ್ನಾ ಏಕೆ ಮಾಡಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಜಿ ಸಿಎಂ ಯಡಿಯೂರಪ್ಪ ನವರಿಗೆ ಟಾಂಗ್ ನೀಡಿದ್ರು.
ಬಿಜೆಪಿ ಜೆಡಿಎಸ್ ಒಂದು ನಾಣ್ಯದ ಎರಡು ಮುಖಗಳು, ಅವರಿಗೆ ಮತ ನೀಡ್ಬೇಡಿ; ಜಮೀರ್ ಅಹ್ಮದ್ ಪ್ರತಿ ಮನೆಯಲ್ಲಿ ದೇವರ ಪೋಟೊ ಜೊತೆ ಸಿದ್ದರಾಮಯ್ಯ ಪೋಟೋ ಇಟ್ಟಿದ್ದರು: ಜಮೀರ್ ಅಹ್ಮದ್ ಖಾನ್: ಇನ್ನೊಂದೆಡೆ ನಮ್ಮ ಕ್ಷೇತ್ರದ ಸ್ಲಂಗಳಲ್ಲಿ ಪ್ರತಿ ಮನೆಯಲ್ಲಿ ದೇವರ ಪೋಟೊ ಜೊತೆ ಸಿದ್ದರಾಮಯ್ಯ ಪೋಟೋ ಇಟ್ಟಿದ್ದಾರೆ. ಅವರು ಅನ್ನರಾಮಯ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊಟ್ಟ ಯೋಜನೆಗಳನ್ನು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ನೆನೆದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಸವಕಲ್ಯಾಣದಿಂದ ಪ್ರಜಾಧ್ವನಿ ಯಾತ್ರೆ ಶುರು ಮಾಡಿದ್ವಿ, ಎಲ್ಲಾ ಕಡೆ ಹೋದರೂ ಜನ ಸ್ಪಂದನೆ ಸಾಕಷ್ಟು ಇದೆ. ಅಭಿವೃದ್ಧಿಯಾಗಬೇಕು ಎಂದರೆ ಅದು ಕಾಂಗ್ರೆಸ್ನಿಂದ ಮಾತ್ರ. ನಮ್ಮ ಕ್ಷೇತ್ರದ ಸ್ಲಮ್ ಗಳಲ್ಲಿ ಪ್ರತಿ ಮನೆಯಲ್ಲಿ ದೇವರ ಪೋಟೋ ಜೊತೆ ಸಿದ್ದರಾಮಯ್ಯ ಪೋಟೋ ಇಟ್ಟಿದ್ದರು.
ಯಾಕೆ ಎಂದು ಕೇಳಿದಾಗ ಕೋವಿಡ್ ನಲ್ಲಿ ಅವರು ಕೊಟ್ಟ ಅಕ್ಕಿ ಇರ್ಲಿಲ್ಲ ಅಂದ್ರೆ ಉಪವಾಸ ಸಾಯುತ್ತಾ ಇರ್ತಿದ್ವಿ ಅಂತ ಹೇಳಿದ್ರು. ಆದರೆ ಬಿಜೆಪಿ ಅನ್ನಭಾಗ್ಯ ಅಕ್ಕಿಯನ್ನೇ ಕಡಿತಗೊಳಿಸಿದ್ರು. ಯಡಿಯೂರಪ್ಪ ಅವರಿಗೆ ಪರಿಷತ್ನಲ್ಲಿ ರೈತರ ಸಾಲ ಮನ್ನ ಮಾಡಿ ಎಂದರೆ ನೋಟ್ ಪ್ರಿಂಟ್ ಮಿಷನ್ ಇಲ್ಲ ಅಂದ್ರು, ನಮ್ಮ ಸಿದ್ದರಾಮಯ್ಯನವರ ಕಡೆ ನೋಟ್ ಪ್ರಿಂಟ್ ಮಿಷನ್ ಇತ್ತಾ?. ಸಿದ್ದರಾಮಯ್ಯ ಎಲ್ಲಾ ಭಾಗ್ಯಗಳನ್ನು ತಂದು ಅಭಿವೃದ್ಧಿ ಮಾಡಿದ್ರು ಎಂದು ಮಾಜಿ ಸಚಿವ ಜಮೀರ್ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹೊಗಳಿದ್ರು.
ಬಿಜೆಪಿ ಜೆಡಿಎಸ್ ಒಂದು ನಾಣ್ಯದ ಎರಡು ಮುಖಗಳು, ಅವರಿಗೆ ಮತ ನೀಡ್ಬೇಡಿ; ಜಮೀರ್ ಅಹ್ಮದ್ : ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯನವರು ಬ್ಯಾಕ್ವೆಂಟ್ ಹಾಲ್ನಲ್ಲಿ ಮಾಡ್ತಿದ್ದರು. ಆದ್ರೆ ಕಾಂಗ್ರೆಸ್ ಜೆಡಿಎಸ್ 20-20 ಸರ್ಕಾರ ಆಡಳಿತಕ್ಕೆ ಬಂದಾಗ ಅಂದು ಸಿಎಂ ಆಗಿದ್ದಾಗ ಹೆಚ್ ಡಿ ಕುಮಾರಸ್ವಾಮಿಯವರು ಟಿಪ್ಪು ಜಯಂತಿಯನ್ನು ಬ್ಯಾಕ್ವೆಂಟ್ ಹಾಲ್ನಲ್ಲಿ ಮಾಡಲಿಲ್ಲ. ನಾವೇಕೆ ಜೆಡಿಎಸ್ಗೆ ಮತ ಕೊಡ್ಬೇಕು, ಬಿಜೆಪಿಗೆ ಏಕೆ ಮತ ಕೊಡ್ಬೇಕು, ಹಿಜಾಬ್, ಅಝಾನ್ ಹೀಗೆ ಸಾಕಷ್ಟು ವಿಚಾರಗಳನ್ನು ಇಟ್ಟುಕೊಂಡು ಬಿಜೆಪಿಯವರು ಆಡಳಿತ ನಡೆಸುತ್ತಿದ್ದಾರೆ ಎಂದರು.
ಇನ್ನು ಬಿಜೆಪಿಗೆ ಜೆಡಿಎಸ್ಗೆ ಮತ ಕೊಡ್ಬೇಡಿ, ಬದಲಿಗೆ ಕಾಂಗ್ರೆಸ್ಗೆ ಮತಗಳನ್ನು ನೀಡಿ, ಅಲ್ಪಸಂಖ್ಯಾತರನ್ನು ಸಿದ್ದರಾಮಯ್ಯ ಕಾಯುತ್ತಾರೆ. ಸಿದ್ದರಾಮಯ್ಯ ನಾಯಕತ್ವದಲ್ಲಿ 160 ಸ್ಥಾನಗಳನ್ನು ಪಡೆಯಲಿದ್ದೇವೆ. ಇದು 40 % ಸರ್ಕಾರ, ಮುಸ್ಲಿಂರಲ್ಲಿ ಮನವಿ ಮಾಡಿಕೊಳ್ಳುವುದೇನೆಂದ್ರೆ ಕಾಂಗ್ರೆಸ್ಗೆ ಮತ ನೀಡಿ ಎಂದರು.
ಇದನ್ನೂ ಓದಿ :ಯಾವುದೇ ಶಕ್ತಿ ಬಂದರೂ ಕುಡಿಯುವ ನೀರು ಕೊಡುವುದನ್ನು ತಡೆಯಲು ಸಾಧ್ಯವಿಲ್ಲ : ಸಿಎಂ ಬಸವರಾಜ ಬೊಮ್ಮಾಯಿ