ದಾವಣಗೆರೆ: ಕೋವಿಡ್ ನಿಂದ ಗುಣಮುಖರಾದ ಬಳಿಕ ಹೊನ್ನಾಳಿಗೆ ಆಗಮಿಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರನ್ನು ಜನರು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಂಡರು.
ಮನೆ ಬಾಡಿಗೆ ಕಟ್ಟಲಾಗದೆ ಸಂಕಷ್ಟಕ್ಕೀಡಾಗಿದ್ದ ಅಂಧ ಕಲಾವಿದರಿಗೆ ನೆರವಾದ ರೇಣುಕಾಚಾರ್ಯ - CM political secretary M P Renukaacharya
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೊನ್ನಾಳಿ ಪಟ್ಟಣದ ತಮ್ಮ ನಿವಾಸದಲ್ಲಿ ಜನತೆಯ ಅಹವಾಲುಗಳನ್ನು ಆಲಿಸಿದರು. ಅಂಧ ಕಲಾವಿದರು ಹಾಗೂ ಕಷ್ಟ ಎಂದು ಬಂದವರಿಗೆ ಧೈರ್ಯ ತುಂಬಿದರು. ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದ ಪರಿಸ್ಥಿತಿಯನ್ನು ಹೇಳಿಕೊಂಡ ಅಂಧರಿಗೆ ಮೂರು ತಿಂಗಳ ಬಾಡಿಗೆ ಹಣವನ್ನು ನೀಡಿದರು. ಜೊತೆಗೆ, ಅವರ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಕೊರೊನಾ ಲಾಕ್ಡೌನ್ನಿಂದಾಗಿ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಮನೆ ನಿರ್ವಹಣೆ ಮಾಡಲಾಗದೆ ಸಮಸ್ಯೆ ಅನುಭವಿಸಿದ ಜನಸಾಮಾನ್ಯರು ರೇಣುಕಾಚಾರ್ಯರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದಾರೆ. ಒಂದೊತ್ತಿನ ಊಟಕ್ಕೆ, ನಿತ್ಯದ ಖರ್ಚಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಸಿಎಂ ರಾಜಕೀಯ ಕಾರ್ಯದರ್ಶಿಯವರೊಂದಿಗೆ ಹಂಚಿಕೊಂಡು ತಮಗೆ ನೆರವಾಗುವಂತೆ ಕೇಳಿಕೊಂಡಿದ್ದಾರೆ.
ಹೊನ್ನಾಳಿ ಪಟ್ಟಣದ ತಮ್ಮ ನಿವಾಸದಲ್ಲಿ ಜನತೆಯ ಅಹವಾಲುಗಳನ್ನು ಆಲಿಸಿದ ರೇಣುಕಾಚಾರ್ಯ, ಅಂಧ ಕಲಾವಿದರು ಹಾಗೂ ಕಷ್ಟ ಎಂದು ಬಂದವರಿಗೆ ಧೈರ್ಯ ತುಂಬಿದರು. ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದ ಪರಿಸ್ಥಿತಿಯನ್ನು ಹೇಳಿಕೊಂಡ ಅಂಧರಿಗೆ ಮೂರು ತಿಂಗಳ ಬಾಡಿಗೆ ಹಣವನ್ನು ನೀಡಿದರು. ಜೊತೆಗೆ, ಅವರ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.