ಕರ್ನಾಟಕ

karnataka

ETV Bharat / state

ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ದಾವಣಗೆರೆ ಪೊಲೀಸರು: ನಿಯಮ ಮೀರದಂತೆ ಎಚ್ಚರಿಕೆ

ನಿಗದಿತ ಪ್ರಯಾಣಿಕರಿಗಿಂತ ಹೆಚ್ಚು ಮಂದಿಯನ್ನು ಕೊಂಡೊಯ್ಯುತ್ತಿದ್ದ ಆಟೋ ಚಾಲಕರ ಮೇಲೆ ದಾವಣಗೆರೆ ಪೊಲೀಸರು ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಸವಾರರು ಸಂಚಾರಿ‌ ನಿಯಮ‌ಗಳನ್ನು ಗಾಳಿಗೆ ತೂರಿ ವಾಹನ ಚಲಾಯಿಸುತ್ತಿದ್ದಾರೆ. ನಿಗದಿಗೂ ಮೀರಿ ಪ್ರಯಾಣಿಕರನ್ನು ಕೊಂಡೊಯ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು

By

Published : Jul 16, 2019, 8:37 PM IST

ದಾವಣಗೆರೆ: ನಿಗದಿತ ಪ್ರಯಾಣಿಕರಿಗಿಂತ ಹೆಚ್ಚು ಮಂದಿಯನ್ನು ಕೊಂಡೊಯ್ಯುತ್ತಿದ್ದ ಆಟೋ ಚಾಲಕರ ಮೇಲೆ ದಾವಣಗೆರೆ ಪೊಲೀಸರು ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆ.

ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಇತ್ತೀಚೆಗೆ ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಸವಾರರು ಸಂಚಾರಿ‌ ನಿಯಮ‌ಗಳನ್ನು ಗಾಳಿಗೆ ತೂರಿ ವಾಹನ ಚಲಾಯಿಸುತ್ತಿದ್ದಾರೆ.‌ ಇನ್ನು ಆಟೋದವರು 3+1 ಪ್ರಯಾಣಿಕರನ್ಜು ಕೂರಿಸಿಕೊಳ್ಳುವ ನಿಯಮವಿದ್ದರೂ ಆಟೋ ಚಾಲಕರು ಏಳೆಂಟು ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪಘಾತಗಳಾಗುವ ಸಂಭವ ಹೆಚ್ಚಿದೆ.

ಆಟೋಗಳ ಸ್ಪೀಕರ್ ಮೇಲೆ ಸೀಟ್ ರೆಡಿ ಮಾಡಿ ಅಲ್ಲಿಯೇ ಪ್ರಯಾಣಿಕರನ್ನು ಕೂರಿಸಿದ್ದು ಕಂಡು ಬಂದ ಹಿನ್ನೆಲೆ ಆಟೋಗಳ ಮೇಲೆ ದಾಳಿ‌ ನಡೆಸಿ ಸ್ಪೀಕರ್ ಬಾಕ್ಸ್​​ಗಳನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಕ್ರಮಕ್ಕೆ ಆಟೋ ಚಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಡೀಸೆಲ್, ಪೆಟ್ರೋಲ್ ದುಬಾರಿಯಾಗಿದ್ದು, ಮೂರು ಸೀಟು ಕೂರಿಸಿದರೆ ನಮಗೆ ಹಣ ಕೈಗೆ ಸಿಗುವುದಿಲ್ಲ. ಐದಾರು ಸೀಟು ಹಾಕಿದರೆ ಮಾತ್ರ ನಮಗೆ ಗಿಟ್ಟುತ್ತದೆ. ಬಸ್​​ನವರು ಅತೀ ಹೆಚ್ಚು ಸೀಟು ಹಾಕಿದರೂ ಕೇಳಲ್ಲ, ನಮಗೆ ಮಾತ್ರ ಕೇಳುತ್ತಾರೆ ಎಂದು ದೂರಿದರು.

ABOUT THE AUTHOR

...view details