ದಾವಣಗೆರೆ:ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕಿತ್ತು, ಆದರೀಗ ಎರಡನೇ ಪಟ್ಟಿಯಲ್ಲಿ ಅವಕಾಶ ಸಿಗಬಹುದೆಂಬ ಆಶಾಭಾವನೆಯಲ್ಲಿದ್ದೇವೆಂದು ದಾವಣಗೆರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದ್ದಾರೆ.
ಅಧಿಕಾರವೇ ಮುಖ್ಯವಲ್ಲ ಅಭಿವೃದ್ದಿ ಮುಖ್ಯ: ಯಶವಂತರಾವ್ ಜಾಧವ್ - yashavantarao jadav
ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ನೀಡದಿರುವುದು ಬೇಸರದ ಸಂಗತಿಯಲ್ಲ. ಎರಡನೇ ಪಟ್ಟಿಯಲ್ಲಿ ಅವಕಾಶ ಸಿಗಬಹುದೆಂಬ ಆಶಾಭಾವನೆಯಲ್ಲಿದ್ದೇವೆಂದು ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಸುದ್ದಿಗಾರರೊಂದಿಗೆ ಹೇಳಿದ್ದಾರೆ. ಜೊತೆಗೆ, ಈಗ ನಮ್ಮದೇ ಆದ ಸರ್ಕಾರ ರಚನೆಯಾಗಿದೆ. ಅಧಿಕಾರವೇ ಮುಖ್ಯವಲ್ಲ ಅಭಿವೃದ್ದಿ ಮುಖ್ಯ, ನಮ್ಮ ಜಿಲ್ಲೆಯಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ತಿಳಿಸಿದ್ದಾರೆ.
ಯಶವಂತರಾವ್ ಜಾಧವ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಬೇಕು, ಆದರೆ ಆರು ಜನ ಶಾಸಕರಿದ್ದರು ಸಚಿವ ಸ್ಥಾನ ನೀಡಿಲ್ಲ ಎಂದು ಯಾರಿಗೂ ಬೇಸರವಿಲ್ಲ. ರಾಜ್ಯದಲ್ಲಿ ಬಿಎಸ್ವೈ ಸಿಎಂ ಆಗಬೇಕು, ದಾವಣಗೆರೆ ಅಭಿವೃದ್ದಿಯಾಗಬೇಕು ಎಂಬುದು ನಮ್ಮ ಕನಸಾಗಿತ್ತೆಂದು ಹೇಳಿದರು.
ಅಷ್ಟೇ ಅಲ್ಲದೇ ಈ ಹಿಂದೆ 14 ತಿಂಗಳು ಕಾಲ ನಾವು ವಿರೋಧ ಪಕ್ಷದಲ್ಲಿದ್ದೆವು, ಆಗ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಾಗಿರಲಿಲ್ಲ, ಈಗ ನಮ್ಮದೇ ಆದ ಸರ್ಕಾರ ರಚನೆಯಾಗಿದೆ. ಅಧಿಕಾರವೇ ಮುಖ್ಯವಲ್ಲ ಅಭಿವೃದ್ದಿ ಮುಖ್ಯ, ನಮ್ಮ ಜಿಲ್ಲೆಯಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ತಿಳಿಸಿದ್ದಾರೆ.