ದಾವಣಗೆರೆ:ಓಡಾಟ ನನಗೆ ಹೊಸದಲ್ಲ. ಇಡೀ ರಾಜ್ಯಾದ್ಯಂತ ನಾನು ಪ್ರವಾಸ ಮಾಡ್ತಿದ್ದೇನೆ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯಿಸಿದರು. ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡುವ ವಿಚಾರವಾಗಿ ಮಾತನಾಡಿ, ಹೈಕಮಾಂಡ್ ಏನು ತೀರ್ಮಾನ ಮಾಡುತ್ತೆ ಕಾದು ನೋಡೋಣ. ಒಟ್ಟಾರೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ರಾಜ್ಯದಲ್ಲಿ ಯಡಿಯೂರಪ್ಪ ಪಕ್ಷವನ್ನು ಕಟ್ಟಿ ಬೆಳೆಸಿದವರು. ಅವರಂತೆ ಜಾತ್ಯತೀತ, ಸಮರ್ಥ ನಾಯಕ ಬೇಕಾಗಿದೆ ಎಂದರು.
ಯಡಿಯೂರಪ್ಪ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ಹೋಗುವುದು ಸೂಕ್ತ. ವಿಜಯದಶಮಿ ದಿನ ಈ ಮಾತು ಹೇಳ್ತಿದ್ದೇನೆ. ಅವರು ಹೊರಟರೆ ಲಕ್ಷಾಂತರ ಕಾರ್ಯಕರ್ತರು ಹಿಂದೆ ನಿಲ್ಲುತ್ತಾರೆ. ನಾನೂ ಸಹ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. ಪಕ್ಷ ಸಂಘಟನೆ ಬೂತ್ ಮಟ್ಟದಿಂದ ಆಗಬೇಕು. ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ಹೋಗಬೇಕು. ಮೊನ್ನೆ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಾಯಿತು. ಹಳಬರ ಕಾಲು ಏನಾದ್ರೂ ಬಿದ್ದು ಹೋಗಿದ್ವಾ. ಒಳಮೀಸಲಾತಿ ಅವಶ್ಯಕತೆ ಏನಿತ್ತು?. ಎಲ್ಲವನ್ನೂ ವರ್ಷಕ್ಕೆ ಮುನ್ನ ಹೇಳಬೇಕಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗಬೇಕಿತ್ತು. ಚುನಾವಣೆಗೆ ಒಂದು ವಾರ ಇದ್ದಾಗ ಈ ರೀತಿ ಮಾಡಿದ್ರು. ಬಿಎಸ್ವೈ ಎಲ್ಲ ಸಮುದಾಯದವರಿಗೆ ಅವಕಾಶ ಕೊಟ್ಟರು ಎಂದು ಹೇಳಿದರು.