ಹರಿಹರ (ದಾವಣಗೆರೆ): ದೇಶದಲ್ಲಿ ಕೊರೊನಾ ಮಹಾಮಾರಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮನೆ ತೊರೆದಿರುವ ವಲಸಿಗರು, ನಿರಾಶ್ರಿತರು ಹಾಗೂ ನಿರ್ಗತಿಕರಿಗೆ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್‌ಐ ಡಿ.ರವಿಕುಮಾರ್ ಊಟ ವಿತರಿಸಿದರು.
ಹಸಿವಿನಿಂದ ಕಂಗೆಟ್ಟಿದ್ದ ನಿರಾಶ್ರಿತರಿಗೆ ಊಟ ವಿತರಿಸಿದ ಪಿಎಸ್‌ಐ - ಕೊರೊನಾ ಲೆಟೆಸ್ಟ್ ನ್ಯೂಸ್
ಲಾಕ್ಡೌನ್ನಿಂದಾಗಿ ಸಾಕಷ್ಟು ಜನ ಪಡಬಾರದ ಕಷ್ಟ ಪಡುತ್ತಿದ್ದಾರೆ. ಕೆಲವರಂತೂ ಊಟವೂ ಸಿಗದೆ ಪರದಾಡುತ್ತಿದ್ದಾರೆ. ಅಂತಹ ಜನರ ನೆರವಿಗೆ ಬರುವ ಮೂಲಕ ಒಂದಷ್ಟು ಜನರು ಮಾನವೀಯ ಕಾರ್ಯ ಮಾಡುತ್ತಿದ್ದಾರೆ.
ಲಾಕ್ಡೌನ್ ಎಫೆಕ್ಟ್: ಹಸಿವಿನಿಂದ ಕಂಗೆಟ್ಟಿದ್ದ ನಿರಾಶ್ರಿತರಿಗೆ ಊಟ ವಿತರಿಸಿದ ಪಿಎಸ್‌ಐ
ತಾಲೂಕಿನ ಗುತ್ತೂರು ಬಳಿಯ ನೂರಾರು ವಲಸಿಗರಿಗೆ ಮತ್ತು ಹನಗವಾಡಿ ಬೈಪಾಸ್ ಬಳಿ ಇರುವ ಹತ್ತಾರು ನಿರ್ಗತಿಕ ಕುಟುಂಬಗಳಿಗೆ ಮದ್ಯಾಹ್ನದ ಊಟದ ಪ್ಯಾಕೇಟ್‌ಗಳನ್ನು ವಿತರಿಸಿದ್ದಾರೆ. ಮನೆಗಳಿಂದ ಅನಾವಶ್ಯಕವಾಗಿ ಹೊರಗೆ ಬಂದವರನ್ನು ಮರಳಿ ಮನೆಗೆ ಕಳಿಸುವ ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಯಲ್ಲಿ ಹಸಿದವರಿಗೆ ಅನ್ನ ನೀಡುವ, ಅವರ ಕಣ್ಣೀರೊರೆಸುವಲ್ಲಿ ಮುಂದಾಗಿರುವುದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗ್ತಿದೆ.