ಹರಿಹರ: ವಿಶ್ವದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಲೇ ಇದೆ. ಈ ನಡುವೆ ಬಡವರಿಗೆ ಸರ್ಕಾರ ನೀಡುತ್ತಿರುವ ಅಕ್ಕಿ, ಗೋಧಿಗೆ ಪಡಿತರರಿಂದ ಹಣ ಪಡೆದರೆ ವಿತರಕರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಎಸ್. ರಾಮಪ್ಪ ಎಚ್ಚರಿಕೆ ನೀಡಿದರು.
ಪಡಿತರದಾರರಿಂದ ಹಣ ಪಡೆದರೆ ವಿತರಕರ ವಿರುದ್ಧ ಕಠಿಣ ಕ್ರಮ : ಶಾಸಕ ರಾಮಪ್ಪ ಎಚ್ಚರಿಕೆ - ಶಾಸಕ ಎಸ್. ರಾಮಪ್ಪ
ಕೆಲವು ಪಡಿತರ ವಿತರಕರು ಪ್ರತಿ ಕಾರ್ಡ್ನಿಂದ 20 ರೂ, ಪಡೆಯುತ್ತಿದ್ದಾರೆ ಎಂದು ನನಗೆ ದೂರುಗಳು ಬರುತ್ತಿವೆ. ಇದರಿಂದಾಗಿ ಈ ಸಭೆಯನ್ನು ಕರೆಯಲಾಗಿದ್ದು, ಯಾರಾದರೂ ಪಡಿತರರಿಂದ ಹಣ ಪಡೆದರೆ ಕೂಡಲೇ ಅಂತವರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಎಸ್. ರಾಮಪ್ಪ ಎಚ್ಚರಿಕೆ ನೀಡಿದ್ದಾರೆ.
ಕೆಲವು ಪಡಿತರ ವಿತರಕರು ಪ್ರತಿ ಕಾರ್ಡ್ ನಿಂದ 20 ರೂ. ಪಡೆಯುತ್ತಿದ್ದಾರೆ ಎಂದು ನನಗೆ ನೂರಾರು ಮಂದಿ ಕರೆ ಮಾಡಿ ದೂರು ನೀಡುತ್ತಿದ್ದಾರೆ. ಈ ಉದ್ದೇಶದಿಂದ ಸಭೆಯನ್ನು ಕರೆಯಲಾಗಿದ್ದು, ಯಾರಾದರೂ ಪಡಿತರದಾರರಿಂದ ಹಣ ಪಡೆದರೆ ಕೂಡಲೇ ಅಂತವರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ನಗರದಲ್ಲಿನ ವ್ಯಾಪಾರಸ್ಥರು ಇದೇ ಸಮಯದಲ್ಲಿ ಗ್ರಾಹಕರಿಕೆ ಮಾಂಸ, ತರಕಾರಿ, ಹೂ, ಹಣ್ಣು, ಇತರ ದಿನಸಿ ಸಾಮಗ್ರಿಗಳನ್ನ ಹೆಚ್ಚಿನ ಬೆಲೆಗಳಿಗೆ ಮಾರಾಟ ಮಾಡುತ್ತಿರುವ ದೂರುಗಳು ಕೇಳಿಬರುತ್ತಿದೆ. ತಾಲೂಕು ಆಡಳಿತ ಈ ವಸ್ತುಗಳ ಧರಪಟ್ಟಿಯನ್ನು ವ್ಯಾಪಾರಿಗಳಿಗೆ ನೀಡಿ, ಅಧಿಕ ಬೆಲೆಗೆ ಮಾರದಂತೆ ಆದೇಶ ನೀಡಬೇಕು ಎಂದು ಸೂಚಿಸಿದರು