ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ, ಡಿಕೆಶಿಯಂತೆ ನಾನೂ ಸಿಎಂ ಸ್ಥಾನ ಕೇಳೇ ಕೇಳ್ತೇನೆ.. ಶಾಸಕ ಶಾಮನೂರು ಶಿವಶಂಕರಪ್ಪ - ಶಿವಶಂಕರಪ್ಪ ಟುಡೆ ನ್ಯೂಸ್

ಎಂಎಲ್​​ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸುತ್ತದೆ. ಎಂಎಲ್​​​ಸಿ ಚುನಾವಣೆ ಗೆಲ್ಲುತ್ತೇವೆ. 140 ಸ್ಥಾನ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಅಂದು ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷಿಯಾಗಿರುತ್ತೇನೆ ಎಂದರು.ಡಿಕೆ ಶಿವಕುಮಾರ್​​, ಸಿದ್ದರಾಮಯ್ಯರಂತೆ ನಾನು ಸಿಎಂ ಸ್ಥಾನ ಕೇಳೇ ಕೇಳುತ್ತೇನೆ. ಕೊನೆಯಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ..

Shivashankarappa
ಶಿವಶಂಕರಪ್ಪ ಸ್ಫೋಟಕ ಹೇಳಿಕೆ

By

Published : Dec 10, 2021, 5:16 PM IST

ದಾವಣಗೆರೆ :ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​​ 140ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ನಾನೇ ಸಿಎಂ ಆಗುವೆ, ನಾನು‌ ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ನಾನು ಸಿಎಂ ರೇಸ್‌ನಲ್ಲಿದ್ದೀನಿ.. ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಆಕಾಂಕ್ಷೆ ವ್ಯಕ್ತಪಡಿಸಿರುವುದು..

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನ ಬಿಜೆಪಿ ಮೇಲೆ ಬೇಸರಗೊಂಡಿದ್ದಾರೆ. ಬಿಜೆಪಿಯವರ ಆಡಳಿತದ ಬಗ್ಗೆ ಜನರಿಗೆ ಸಮಾಧಾನ ಇಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್ ಗೆಲ್ಲಿಸಲಿದ್ದಾರೆ. ನಮಗೆ ಯಾರ ಬೆಂಬಲವೂ ಬೇಡ.

ಎಂಎಲ್​​ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸುತ್ತದೆ. ಎಂಎಲ್​​​ಸಿ ಚುನಾವಣೆ ಗೆಲ್ಲುತ್ತೇವೆ. 140 ಸ್ಥಾನ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಅಂದು ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷಿಯಾಗಿರುತ್ತೇನೆ ಎಂದರು.

ಡಿಕೆ ಶಿವಕುಮಾರ್​​, ಸಿದ್ದರಾಮಯ್ಯರಂತೆ ನಾನು ಸಿಎಂ ಸ್ಥಾನ ಕೇಳೇ ಕೇಳುತ್ತೇನೆ. ಕೊನೆಯಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

ಇದನ್ನೂ ಓದಿ: ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದ ವರುಣ್ ಸಿಂಗ್​​ಗೆ ತಜ್ಞ ವೈದ್ಯರಿಂದ ಚಿಕಿತ್ಸೆ: ಸಿಎಂ ಬೊಮ್ಮಾಯಿ

ABOUT THE AUTHOR

...view details