ದಾವಣಗೆರೆ:ಕೊರೊನಾಕ್ಕೆ ಜಿಲ್ಲೆಯಲ್ಲಿ ಮೊದಲ ಬಲಿಯಾದ 69 ವರ್ಷದ ವೃದ್ಧನ ಅಂತ್ಯಸಂಸ್ಕಾರ ನಿನ್ನೆ ರಾತ್ರಿಯೇ ನಡೆಸಲಾಗಿದೆ.
ಪಿ-556 ಸೋಂಕಿತ ಕಳೆದ ರಾತ್ರಿ 9.30 ಕ್ಕೆ ಮೃತಪಟ್ಟಿದ್ದರು. ಮೃತರ ಶವಸಂಸ್ಕಾರವನ್ನು ಕಳೆದ ರಾತ್ರಿ 3.45 ಕ್ಕೆ ಜಿಲ್ಲಾಡಳಿತ ಮುಗಿಸಿದೆ. ದಾವಣಗೆರೆ ಎಸ್ಪಿ ಹನುಮಂತರಾಯ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸಲಹೆ ಸೂಚನೆಯಂತೆ ಕೋವಿಡ್-19 ನಿಯಮಾವಳಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ರಾತ್ರಿಯೇ ನೆರವೇರಿದ ಕೊರೊನಾಗೆ ಬಲಿಯಾದ ವೃದ್ಧನ ಅಂತ್ಯಸಂಸ್ಕಾರ
ಕೋವಿಡ್-19 ಸೋಂಕಿನಿಂದ ಮೃತಪಟ್ಟ ದಾವಣಗೆರೆ ವೃದ್ಧನ ಶವಸಂಸ್ಕಾರವನ್ನು ಜಿಲ್ಲಾಡಳಿತ ಕೊರೊನಾ ನಿಯಮಾವಳಿಯಂತೆ ನಿನ್ನೆ ರಾತ್ರಿಯೇ ಮಾಡಿ ಮುಗಿಸಿದೆ.
ವೃದ್ಧನ ಅಂತ್ಯಸಂಸ್ಕಾರ
ಇನ್ನು ಮೃತ ವೃದ್ಧನ ಕುಟುಂಬದ ಐವರು ಸದಸ್ಯರಿಗೆ ಪಾಸಿಟಿವ್ ಬಂದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂತ್ಯಕ್ರಿಯೆಯಲ್ಲೂ ಪಾಲ್ಗೊಳ್ಳಲಾರದಂತಹ ಹೀನಾಯ ಸ್ಥಿತಿಯಲ್ಲಿ ಕುಟುಂಬದ ಸದಸ್ಯರಿದ್ದಾರೆ.