ದಾವಣಗೆರೆ:ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಡಾ.ವೈ.ನಾಗಪ್ಪ ಇಂದು ಬೆಳಿಗ್ಗೆ ಕೊನೆಯುಸಿರೆಳೆದರು.
ಡಾ.ವೈ.ನಾಗಪ್ಪ ಅವರು 1974 ರಿಂದ 76ರವರೆಗೆ ಮೈಸೂರಿನಲ್ಲಿ ಎಂಡಿ ಅಧ್ಯಯನ ಮಾಡಿದ್ದರು. ಬಳಿಕ 1976 ರಿಂದ 79 ರವರೆಗೆ ದಾವಣಗೆರೆ ಹಾಗೂ 1979 ರಿಂದ 82ರವರೆಗೆ ಹರಿಹರದಲ್ಲಿ ಸರ್ಕಾರಿ ವೈದ್ಯರಾಗಿ, ಕೆಎಸ್‌ಎಸ್‌ಐಡಿಸಿ, ಎಸ್ಸಿ-ಎಸ್ಟಿ ಬೋರ್ಡ್ ಚೇರ್ಮನ್ ಆಗಿ ಸೇವೆ ಸಲ್ಲಿಸಿದ್ದರು. ಪದೇ ಪದೆ ವರ್ಗಾವಣೆಗೆ ಬೇಸತ್ತ ಇವರು, ಅಂದಿನ ಹಾಲಿ ಶಾಸಕ ಹೆಚ್.ಶಿವಪ್ಪರಿಗೆ ಸೆಡ್ಡು ಹೊಡೆದು ರಾಜಕೀಯ ಪ್ರವೇಶ ಪಡೆದರು. ಬಳಿಕ ಹರಿಹರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು.