ದಾವಣಗೆರೆ:ಮಹಾನಗರ ಪಾಲಿಕೆ ಸದಸ್ಯ ವಾಹನದ ಪಾಸ್ ದುರ್ಬಳಕೆ ಮಾಡಿಕೊಂಡಿದ್ದು, ಪಾಸ್ ಹಾಗೂ ವಾಹನ ಸೀಜ್ ಮಾಡಲಾಗಿದೆ. ಬಳಿಕ ಪಾಲಿಕೆ ಸದಸ್ಯ ನಡೆದುಕೊಂಡೇ ಮನೆಗೆ ತೆರಳಿದ ಘಟನೆ ನಡೆದಿದೆ.
ನಕಲಿ ಪಾಸ್ ಬಳಕೆ: ಕಾರ್ಪೊರೇಟರ್ ವಾಹನ ಜಪ್ತಿ
ಕೊರೊನಾ ಲಾಕ್ಡೌನ್ ಹಿನ್ನೆಲೆ ವಾಹನ ಸವಾರರಿಗೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆ ಅಗತ್ಯವಿರುವವರಿಗೆ ಪಾಸ್ ವಿತರಿಸಲಾಗಿದ್ದು, ಈ ಪಾಸ್ ಕೂಡ ಈಗ ನಕಲಿ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ಇಲಾಖೆಯಿಂದ ವಾಹನದ ನಂಬರ್ ಬರೆದು ವಿತರಣೆ ಮಾಡಲಾಗಿತ್ತು. ಸದಸ್ಯನ ಬಳಿ ಇದ್ದ ಪಾಸ್ನಲ್ಲಿ ವಾಹನದ ನಂಬರ್ ಇಲ್ಲದ ಪಾಸ್ ಇತ್ತು. ವಾರ್ಡ್ ನಂಬರ್ 41ರ ಕಾರ್ಪೊರೇಟರ್ ಕಲ್ಲಳ್ಳಿ ನಾಗರಾಜ್ ಬಳಿ ಪಾಸ್ ಪತ್ತೆಯಾಗಿತ್ತು.
ಪೊಲೀಸ್ ಇಲಾಖೆಯಿಂದ ವಾಹನದ ನಂಬರ್ ಬರೆದು ವಿತರಣೆ ಮಾಡಲಾಗಿತ್ತು. ಸದಸ್ಯನ ಬಳಿ ಇದ್ದ ಪಾಸ್ನಲ್ಲಿ ವಾಹನದ ನಂಬರ್ ಇಲ್ಲದ ಪಾಸ್ ಇತ್ತು. ವಾರ್ಡ್ ನಂಬರ್ 41ರ ಕಾರ್ಪೊರೇಟರ್ ಕಲ್ಲಳ್ಳಿ ನಾಗರಾಜ್ ಬಳಿ ಪಾಸ್ ಪತ್ತೆಯಾಗಿತ್ತು.
ಪಾಲಿಕೆಯಿಂದ ಸದಸ್ಯರಿಗೆ ನೀಡಿರುವ ಒಂದು ಪಾಸ್ ಜೊತೆಗೆ ಪೊಲೀಸ್ ಇಲಾಖೆಯಿಂದ ನೀಡಿರುವ ಪಾಸ್ ಕೂಡ ಪತ್ತೆಯಾಗಿತ್ತು. ಬೇರೊಬ್ಬರ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಪಾಸ್ ಬಳಕೆ ಮಾಡಿಕೊಂಡಿದ್ದು ಗೊತ್ತಾಗಿದ್ದು, ನಗರದ ಕೆಇಬಿ ವೃತ್ತದಲ್ಲಿ ವಾಹನಗಳ ತಪಾಸಣೆ ವೇಳೆ ಅನಧಿಕೃತ ಪಾಸ್ ಸೀಜ್ ಮಾಡಲಾಯಿತು. ತಪ್ಪಾಯ್ತು ಬಿಟ್ಟು ಬಿಡಿ ಎಂದು ಪಾಲಿಕೆ ಸದಸ್ಯ ಕೇಳಿಕೊಂಡರೂ ಪಾಸನ್ನು ಪೊಲೀಸರು ಸೀಜ್ ಮಾಡಿದರು. ಕಾರನ್ನು ತಮ್ಮ ವಶಕ್ಕೆ ಪಡೆದುಕೊಂಡ ಹಿನ್ನೆಲೆಯಲ್ಲಿ ನಾಗರಾಜ್ ನಡೆದುಕೊಂಡೇ ತೆರಳಿದರು.