ದಾವಣಗೆರೆ: ದಾವಣಗೆರೆಯಲ್ಲಿ ಪುಕ್ಸಟ್ಟೆ ಜಾಗ ಸಿಗುತ್ತೆ ಎಂದು ಜನ ಸ್ಮಶಾನದ ಜಾಗದಲ್ಲಿ ಸೈಟ್ ಮಾಡಿಕೊಂಡ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದ ಬಳಿ ನಡೆದಿದೆ.
ದಾವಣಗೆರೆಯಲ್ಲಿ ಪುಕ್ಸಟ್ಟೆ ಜಾಗ ಕೊಡ್ತಾರೆ ಎಂಬ ವದಂತಿ: ಮುಂದೇನಾಯ್ತು? - ನ್ಯಾಮತಿ ತಾಲೂಕಿನ ಸುರಹೊನ್ನೆ
ಉಚಿತವಾಗಿ ಜಾಗ ನೀಡಲಾಗುತ್ತಿದೆ ಎಂದು ಸುಳ್ಳು ಸುದ್ದಿಯನ್ನು ನಂಬಿದ ಜನ ಸ್ಮಶಾನ ಜಾಗಕ್ಕೆ ಮುಗಿಬಿದ್ದು ನಂತರ ಬರಿಗೈಲಿ ವಾಪಸಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯಲ್ಲಿ ಪುಕ್ಸಟ್ಟೆ ಜಾಗ ಕೊಡ್ತಾರೆ ಸಿಗುತ್ತೆ ಅಂತಾ ಮುಗಿಬಿದ್ದ ಜನ
ಗಾಳಿ ಸುದ್ದಿಗೆ ಕಿವಿ ಕೊಟ್ಟ ಜನ ಖಾಲಿ ನಿವೇಶನಕ್ಕಾಗಿ ಮುಗಿಬಿದ್ದರು. ಉಚಿತ ಸೈಟ್ ಸಿಗುತ್ತದೆ ಎಂದು ಗೂಟ ನೆಟ್ಟು ಸೈಟ್ ನಮ್ಮದೆಂದು ಹೇಳುತ್ತಿದ್ದರು. ಸುರಹೊನ್ನೆ ಹಾಗೂ ಎರಗನಾಳ್ ರಸ್ತೆಯಲ್ಲಿರುವ ಸ್ಮಶಾನ ಜಾಗದಲ್ಲಿ ತಾವೇ ನಿವೇಶನಗಳನ್ನು ಸೃಷ್ಟಿಸಿಕೊಂಡಿದ್ದರು.
ಬಳಿಕ ಸುಳ್ಳು ಸುದ್ದಿ ಎಂದು ತಿಳಿದ ಜನ ಮನೆಯತ್ತ ಹೆಜ್ಜೆ ಹಾಕಿದರು. ಕೆಲ ದಿನಗಳ ಹಿಂದೆ ಚನ್ನಗಿರಿಯಲ್ಲಿ ಇಂತಹದೇ ಘಟನೆ ನಡೆದಿತ್ತು.