ಕರ್ನಾಟಕ

karnataka

ETV Bharat / state

ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬ ನಾಟಕದ ಕಂಪನಿ : ಶಾಸಕ ಎಂ.ಪಿ.ರೇಣುಕಾಚಾರ್ಯ - ನಿಖಿಲ್ ಕುಮಾರಸ್ವಾಮಿ

ಸುಮಲತಾ ಬಗ್ಗೆ ಹಗುರ ಹೇಳಿಕೆ ಹಿನ್ನೆಲೆ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ನಾಟಕೀಯವಾಗಿ ಕ್ಷಮೆಯಾಚಿಸಿದ್ದಾರೆ. ಸಿ.ಎಮ್ ಗೆ ತಾಕತ್ ಇದ್ದರೆ ರೇವಣ್ಣ ಅವರನ್ನ ಸಚಿವ ಸಂಪುಟದಿಂದ ಕೈಬಿಡಲಿ ಎಂದು ಹೇಳಿಕೆ ನೀಡಿದ್ದಾರೆ.

ಸುಮಲತಾ ಬಗ್ಗೆ ರೇವಣ್ಣ ಹಗುರ ಹೇಳಿಕೆ ಹಿನ್ನಲೆ ದಾವಣಗೆರೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ

By

Published : Mar 11, 2019, 3:43 PM IST

ದಾವಣಗೆರೆ : ಸುಮಲತಾ ಬಗ್ಗೆ ರೇವಣ್ಣ ಹಗುರ ಹೇಳಿಕೆ ಹಿನ್ನಲೆ ದಾವಣಗೆರೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದೇವೇಗೌಡರ ಮನೆಲೀ ಯಾರಾದ್ರೂ ಸತ್ತಿದ್ರೆ ಇವರ ಕುಟುಂಬದವ್ರು ಒಂದೇ ವಾರದಲ್ಲಿ ಅಖಾಡಕ್ಕೆ ಬರುತ್ತಿದ್ದರು ಎಂದು ಎಚ್.ಡಿ.ರೇವಣ್ಣಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ಸುಮಲತಾ ಬಗ್ಗೆ ಹಗುರ ಹೇಳಿಕೆ ಸಲ್ಲದು. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ನಾಟಕೀಯವಾಗಿ ಕ್ಷಮೆಯಾಚಿಸಿದ್ದಾರೆ. ಕುಮಾರಸ್ವಾಮಿಗೆ ತಾಕತ್ ಇದ್ದರೆ ರೇವಣ್ಣ ಅವರನ್ನ ಸಚಿವ ಸಂಪುಟದಿಂದ ಕೈಬಿಡಬೇಕು, ಇಲ್ಲದಿದ್ದರೆ ಜಿಡಿಎಸ್ ಸರ್ವನಾಶ ಶತಸಿದ್ಧ ಎಂದು ಕಿಡಿಕಾರಿದ್ದಾರೆ.

ಸುಮಲತಾ ಬಗ್ಗೆ ರೇವಣ್ಣ ಹಗುರ ಹೇಳಿಕೆ ಹಿನ್ನಲೆ ದಾವಣಗೆರೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ

ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬ ನಾಟಕದ ಕಂಪನಿ, ನಾಟಕ ಅಡೋದು ಅವರಿಗೆ ಚನ್ನಾಗಿ ಗೊತ್ತು ಎಂದರು. ಸುಮಲತಾ ಬಿಜೆಪಿಗೆ ಬಂದ್ರೆ ಸ್ವಾಗತ ಎಂದರು.

ಲೋಕಸಭಾ ಚುನಾವಣೆ ಮೋದಿ ವರ್ಸಸ್ ಮಹಾಘಟಬಂಧನ್ ನಡುವೆ ನಡೆಯತ್ತೆ, ಮಹಾಘಟ್ ಬಂಧನಗೆ ಯಾರು ನಾಯಕರು ಅನ್ನೊದೇ ಗೊತ್ತಿಲ್ಲ. ಸೂರ್ಯ-ಚಂದ್ರದ್ರು ಇರೋದು ಎಷ್ಟು ಸತ್ಯನೋ ಮೋದಿ ಮತ್ತೆ ಪ್ರಧಾನಿ ಆಗೋದು ಅಷ್ಟೇ ಸತ್ಯ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

ABOUT THE AUTHOR

...view details