ದಾವಣಗೆರೆ: ಸುಲಲಿತ ಜೀವನ ನಡೆಸಲು ನಗರಗಳು ಯಾವ ರೀತಿ ಅರ್ಹತೆ ಪಡೆದಿವೆ ಎಂದು 2019ರಲ್ಲಿ ಕೇಂದ್ರ ಸರ್ಕಾರ ಸರ್ವೇ ಹಮ್ಮಿಕೊಂಡಿತ್ತು. ಈ ಸರ್ವೇ ಪೂರ್ಣಗೊಳಿಸಿದ ಬಳಿಕ ಇದೀಗ ನಗರಗಳ ಸರ್ವೇ ಕಾರ್ಯದ ಫಲಿತಾಂಶವನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಸುಲಲಿತ ಜೀವನ ನಡೆಸಲು ಬೆಣ್ಣೆ ನಗರಿ ರಾಜ್ಯದಲ್ಲೇ ಬೆಸ್ಟ್ ಎಂದು ಕೇಂದ್ರ ಸರ್ಕಾರ 9ನೇ ರ್‍ಯಾಂಕ್ ನೀಡಿದೆ.
ದಾವಣಗೆರೆಯನ್ನು ಮಧ್ಯ ಕರ್ನಾಟಕ ಕೇಂದ್ರ ಬಿಂದು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡಿ ಘೋಷಣೆ ಮಾಡಿತ್ತು. ಈ ಘೋಷಣೆ ಮಾಡಿದ ಬೆನ್ನಲ್ಲೇ ದಾವಣಗೆರೆ ನಗರ ಅಷ್ಟೇ ಅಭಿವೃದ್ಧಿ ಹೊಂದಿದೆ.
ಸುಲಲಿತ ಜೀವನ ನಡೆಸಲು 13 ಅಂಶಗಳಲ್ಲೂ ಅರ್ಹತೆ ಪಡೆದ ಬೆಣ್ಣೆ ನಗರಿ:
ಸುಲಲಿತ ಜೀವನ ನಡೆಸಲು ಅರ್ಹ ನಗರವಾಗಲು ಕೇಂದ್ರ ನಗರಾಭಿವೃದ್ಧಿ ಇಲಾಖೆ 13 ಅಂಶಗಳ ಸರ್ವೇ ನಡೆಸಿತ್ತು. ವಿದ್ಯಾಭ್ಯಾಸ, ಆರೋಗ್ಯ ಸೌಲಭ್ಯ, ಮನೆ, ಸ್ವಚ್ಛತೆ, ಸಂಚಾರ ಸೌಲಭ್ಯ, ಪೊಲೀಸ್ ಭದ್ರತೆ, ಮನೋರಂಜನೆ, ಆರ್ಥಿಕತೆ, ಈ ಎಲ್ಲಾ ಸೌಲಭ್ಯ ಇದೆಯೇ? ಎಂಬ ಆನ್ಲೈನ್ ಸರ್ವೇಯನ್ನು ಕೇಂದ್ರ ಸರ್ಕಾರ ಎಲ್ಲ ಸ್ಮಾರ್ಟ್ ಸಿಟಿಗಳಲ್ಲಿ ಒಮ್ಮೆಲೆ ಸರ್ವೇ ಮಾಡಿದ ಬೆನ್ನಲ್ಲೇ ಜನರು ತಮ್ಮ ಅಭಿಪ್ರಾಯ ಸಲ್ಲಿಸಿದ್ದರು. ಈ ಎಲ್ಲಾ 13 ಅಂಶಗಳಲ್ಲಿ ದಾವಣಗೆರೆ ಹತ್ತು ಲಕ್ಷ ಜನಸಂಖ್ಯೆ ನಗರಗಳ ಪೈಕಿ ಇಡೀ ದೇಶದಲ್ಲಿ 9 ರ್‍ಯಾಂಕ್ ಪಡೆದುಕೊಂಡಿದೆ.