ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ಕೊರೊನಾಕ್ಕೆ ಇಬ್ಬರು ಬಲಿ: 82 ಮಂದಿ ಡಿಸ್ಚಾರ್ಜ್

ಜಿಲ್ಲೆಯಲ್ಲಿ ಕೊರೊನಾಕ್ಕೆ ಇಬ್ಬರು ಬಲಿಯಾಗಿದ್ದು, ಸಾವಿನ ಸಂಖ್ಯೆ 57ಕ್ಕೇರಿದೆ. 41 ಮಂದಿಗೆ ಇಂದು ಸೋಂಕು ತಗುಲಿರುವುದು ದೃಢಪಟ್ಟಿದೆ.

davanagere
davanagere

By

Published : Aug 3, 2020, 11:18 PM IST

ದಾವಣಗೆರೆ:ಜುಲೈ 24ರಂದು ತೀವ್ರ ಉಸಿರಾಟದ ಸಮಸ್ಯೆ, ಕಫ, ಜ್ವರದಿಂದ ಬಳಲುತ್ತಿದ್ದ 50 ವರ್ಷದ ಪುರುಷ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೊರೊನಾ‌ ಸೋಂಕು ತಗುಲಿರುವುದು ಗಂಟಲು ಪರೀಕ್ಷೆ ವೇಳೆ ಖಚಿತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 2 ರಂದು ಮೃತಪಟ್ಟಿದ್ದಾರೆ. ಇನ್ನು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 79 ವರ್ಷದ ವೃದ್ಧ ವ್ಯಕ್ತಿ ಆಗಸ್ಟ್‌ 1 ರಂದು ದಾಖಲಾಗಿದ್ದರು. ಇವರಿಗೆ ವೈರಾಣು ಹೇಗೆ ಬಂತು ಎಂಬ ಬಗ್ಗೆ ಶೋಧ ಮುಂದುವರಿದಿದ್ದು, ಆಸ್ಪತ್ರೆಗೆ ದಾಖಲಾದ ದಿನವೇ ಸಾವು ಕಂಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ಅಸುನೀಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 2428 ಮಂದಿ ಸೋಂಕಿತರಿದ್ದಾರೆ.‌ ಇಂದು 82 ಸೋಂಕಿತರು ಸಂಪೂರ್ಣವಾಗಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 1561 ಜನರು ಡಿಸ್ಚಾರ್ಜ್ ಆಗಿದ್ದಾರೆ. 810 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 10 ಮಂದಿ ಐಸಿಯುವಿನಲ್ಲಿದ್ದು ತೀವ್ರ ನಿಗಾ ವಹಿಸಲಾಗಿದೆ.

ABOUT THE AUTHOR

...view details