ಕರ್ನಾಟಕ

karnataka

ETV Bharat / state

ಜೆಸಿಬಿ ಮೂಲಕ ಮೃತಪಟ್ಟ ಸೋಂಕಿತೆಯ ಅಂತ್ಯಸಂಸ್ಕಾರ: ವಿಡಿಯೋ ವೈರಲ್​​ - ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಬಳ್ಳಾರಿಯಲ್ಲಿ ಮೃತಪಟ್ಟಿದ್ದ ಸೋಂಕಿತರನ್ನು ಅಮಾನವೀಯವಾಗಿ ಅಂತ್ಯಸಂಸ್ಕಾರ ಮಾಡಿದ್ದು, ಬೆಳಕಿಗೆ ಬಂದ ಬೆನ್ನಲ್ಲೇ ಇಂತಹದ್ದೇ ಮತ್ತೊಂದು ಘಟನೆ ದಾವಣಗೆರೆಯಲ್ಲಿ ಕಂಡು ಬಂದಿದೆ.

cremation
ಅಂತ್ಯಸಂಸ್ಕಾರ

By

Published : Jul 1, 2020, 11:41 AM IST

ದಾವಣಗೆರೆ: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನಾಕ್ಕೆ ಬಲಿಯಾದ ಚನ್ನಗಿರಿಯ ವೃದ್ಧೆಯ ಅಂತ್ಯ ಸಂಸ್ಕಾರವನ್ನು ಜೆಸಿಬಿ ಮೂಲಕ ನೆರವೇರಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಚನ್ನಗಿರಿಯ ವೃದ್ಧೆ ತೀವ್ರ ಉಸಿರಾಟದ ತೊಂದರೆಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಜೂನ್ 14ರಂದು ದಾಖಲಾಗಿದ್ದರು. ಅವರನ್ನು ಪರೀಕ್ಷಿಸಿದಾಗ ಕೊರೊನಾ ಸೋಂಕು ದೃಢಪಟ್ಟಿದ್ದು, ಜೂನ್​ 17 ರಂದು ಸಾವನ್ನಪ್ಪಿದ್ದರು. ಅವರ ಮೃತದೇಹವನ್ನು ಜೂ. 18ರಂದು ಜೆಸಿಬಿ ಮೂಲಕ ಅಂತ್ಯಸಂಸ್ಕಾರ ಮಾಡಲಾಗಿತ್ತು.

ಸೋಂಕಿತೆಯ ಅಂತ್ಯ ಸಂಸ್ಕಾರದ ದೃಶ್ಯ

ಸೋಂಕಿತೆಯ ಮೃತದೇಹವನ್ನು ಜೆಸಿಬಿಯ ಫ್ರಂಟ್​ ಬಕೆಟ್​​ನಲ್ಲಿಟ್ಟು ಗುಂಡಿಯೊಳಗೆ ಹಾಕಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಬಳ್ಳಾರಿಯಲ್ಲಿ ಮಂಗಳವಾರ ಅಮಾನವೀಯವಾಗಿ ಅಂತ್ಯಸಂಸ್ಕಾರ ಮಾಡಿದ್ದು, ಬೆಳಕಿಗೆ ಬಂದ ಬೆನ್ನಲ್ಲೇ ಇದೂ ಕೂಡಾ ಇಂದು ಬಯಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರು ಜೆಸಿಬಿ ಮೂಲಕ ದಫನ್ ಮಾಡಿರುವ ವಿಡಿಯೋ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪು ನಡೆದಿದ್ದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ABOUT THE AUTHOR

...view details