ಕರ್ನಾಟಕ

karnataka

ETV Bharat / state

ಚಂದ್ರು ಸಾವಿನ ಪ್ರಕರಣ: ಸಿಐಡಿ, ಎನ್​​​​ಐಎ ತನಿಖೆಗೆ ಆಪ್ ಒತ್ತಾಯ - Honnali MLA MP Renukacharya

ಚಂದ್ರು ಸಾವು ಸಾಕಷ್ಟು ನೋವು ಉಂಟು ಮಾಡಿದೆ ಎಂದು ಹೊನ್ನಾಳಿ ತಾಲೂಕಿನ ಆಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಗುರುಪಾದಯ್ಯ ಮಠದ ಬೇಸರ ಹೇಳಿಕೊಂಡಿದ್ದರು.

Aam Aadmi Party taluk president Gurupadiah Mathd
ಆಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಗುರುಪಾದಯ್ಯ ಮಠದ್

By

Published : Nov 8, 2022, 4:18 PM IST

Updated : Nov 8, 2022, 6:57 PM IST

ದಾವಣಗೆರೆ:- ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಅವರ ಸಹೋದರ ಪುತ್ರ ಚಂದ್ರಶೇಖರ್ ಸಾವು ಸಾಕಷ್ಟು ಆಘಾತ ಉಂಟುಮಾಡಿದೆ ಎಂದು ಹೊನ್ನಾಳಿ ತಾಲೂಕಿನ ಆಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಗುರುಪಾದಯ್ಯ ಮಠದ ಬೇಸರ ವ್ಯಕ್ತಪಡಿಸಿದರು.

ಆಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಗುರುಪಾದಯ್ಯ ಮಠದ

ನಂತರ ಮಾತನಾಡಿದ ಅವರು ಚಂದ್ರು ಹೊನ್ನಾಳಿ ತಾಲೂಕಿನಲ್ಲಿ ಪಕ್ಷಾತೀತವಾಗಿ ಶಾಸಕರ ಮನೆಯವರಂತೆ ಇರದೇ ಎಲ್ಲರೊಂದಿಗೆ ಸ್ನೇಹ ಬೆಳೆಸಿ ಕೊಂಡು ಕ್ಷೇತ್ರದ ಮಗನಂತೆ ಇದ್ದವನು ಎಂದು ಹೇಳಿದರು. ಸರ್ಕಾರದ ಅವಿಭಾಜ್ಯ ಅಂಗ ಆಗಿರುವ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಇದು ಅಪಘಾತ ಅಲ್ಲ ಕೊಲೆ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಶಾಸಕರೇ ಆರೋಪ‌ ಮಾಡುತ್ತಿದ್ದಾರೆ.

ಹಾಗಾಗಿ ಶಾಸಕರೇ ಅವಿಶ್ವಾಸ ತೋರಿದ ಬೆನ್ನಲ್ಲೇ ಅನುಮಾನ ಉಂಟು ಮಾಡಿದೆ ಎಂದರು. ಈ ಪ್ರಕರಣವನ್ನು ಸಿಐಡಿ, ಇಲ್ಲ ಎನ್​​​​​ಐಎಗೆ ವಹಿಸಬೇಕು ಎಂದು ಗುರುಪಾದಯ್ಯ ಮಠದ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಇದನ್ನೂ ಓದಿ:ಚಂದ್ರು ಸಾವು ಸಹಜ ಸಾವೋ ಅಸಹಜವೋ ತನಿಖೆ ಮೂಲಕ ತಿಳಿಯಬೇಕಿದೆ: ಕೆ.ಎಸ್ ಈಶ್ವರಪ್ಪ

Last Updated : Nov 8, 2022, 6:57 PM IST

ABOUT THE AUTHOR

...view details