ದಾವಣಗೆರೆ:ಮನೆಮುಂದೆ ನಿಲ್ಲಿಸಿರುವ ಗೂಡ್ಸ್ ಆಟೋಗಳನ್ನು ಗುರಿಯಾಗಿಸಿ ಕಳ್ಳನೋರ್ವ ಬ್ಯಾಟರಿಗಳನ್ನು ಕದಿಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ರಾತ್ರಿ ಆಗುತ್ತಿದ್ದಂತೆ ಬ್ಯಾಟರಿ ಕದಿಯಲು ಸಂಚು ಹಾಕುವ ಈತ ಬ್ಯಾಟರಿ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ದಾವಣಗೆರೆ ನಗರದ ನಿಟ್ಟುವಳ್ಳಿಯ ಮೌನೇಶ್ವರ ಬಡಾವಣೆಯ ಮನೆ ಮುಂದೆ ನಿಲ್ಲಿಸಿದ್ದ ಗೂಡ್ಸ್ ಆಟೋದಲ್ಲಿ ಅಳವಡಿಸಿದ್ದ ಬ್ಯಾಟರಿ ಕದಿಯುತ್ತಿರುವ ಘಟನೆ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗೂಡ್ಸ್ ಆಟೋ ಮಾಲೀಕ ರಮೇಶ್ ಎಂಬುವರಿಗೆ ಸೇರಿದ ಕೆಎ 17 ಸಿ 2221 ನೋಂದಣಿಯ ಆಟೋದ ಬ್ಯಾಟರಿ ಕಳುವಾಗಿದ್ದು, ಇಂತಹ ಪ್ರಕರಣಗಳಿಂದ ಇಲ್ಲಿನ ನಿವಾಸಿಗಳು ರೋಸಿ ಹೋಗಿದ್ದಾರೆ. ಘಟನೆ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ನಿವಾಸಿಗಳು ಸಾಕಷ್ಟು ಬಾರಿ ಪೊಲೀಸರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ.
ದಾವಣಗೆರೆಯಲ್ಲಿದ್ದಾನೆ ಬ್ಯಾಟರಿ ಕಳ್ಳ ಆಟೋ ಮಾಲೀಕ ಮಾತನಾಡಿ, ಇಂತಹ ಕಳ್ಳತನಗಳು ಸರ್ವೇ ಸಾಮಾನ್ಯವಾಗಿವೆ. ಸಾಕಷ್ಟು ಬಾರಿ ಪೊಲೀಸ್ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ರಾತ್ರೋರಾತ್ರಿ 35ಕ್ಕೂ ಹೆಚ್ಚು ಬೈಕ್ಗಳ ಬ್ಯಾಟರಿ ಕಳ್ಳತನ: ಇದ್ದೂ ಇಲ್ಲದಂತಾದ ಕೋಟಿ ರೂ. ಸಿಸಿಟಿವಿ..!