ಕರ್ನಾಟಕ

karnataka

ETV Bharat / state

ಡಿಸಿ ಭೇಟಿ ಬಳಿಕ ಎಚ್ಚೆತ್ತ ತಾಲೂಕಾಡಳಿತ: ಕಂಟೈನ್​ಮೆಂಟ್ ಪ್ರದೇಶಗಳಿಗೆ ನೋಡಲ್ ಅಧಿಕಾರಿ ನೇಮಕ

ನಗರಸಭೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬಳಿಕ ಎಲ್ಲ ಕಂಟೈನ್‌​ಮೆಂಟ್​ ಪ್ರದೇಶಗಳಿಗೆ ನೋಡಲ್​ ಅಧಿಕಾರಿಗಳನ್ನು ತಾಲೂಕಾಡಳಿತ ನೇಮಿಸಿದೆ.

ಡಿಸಿ ಭೇಟಿ ಬಳಿಕ ಎಚ್ಚೆತ್ತ ತಾಲೂಕಾಡಳಿತ
ಡಿಸಿ ಭೇಟಿ ಬಳಿಕ ಎಚ್ಚೆತ್ತ ತಾಲೂಕಾಡಳಿತ

By

Published : Jul 15, 2020, 9:32 PM IST

ಹರಿಹರ (ದಾವಣಗೆರೆ): ನಗರಸಭೆಗೆ ಮಂಗಳವಾರ ಜಿಲ್ಲಾಧಿಕಾರಿ ಮಹಾಂತೇಶ್​ ಬೀಳಗಿ ದಿಢೀರ್​ ಭೇಟಿ ನೀಡಿ, ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗಾಗಿ ಇಂದು ತಾಲೂಕಾಡಳಿತ ಎಲ್ಲ ನಿಷೇಧಿತ ಪ್ರದೇಶಗಳಿಗೆ ನೋಡಲ್​ ಅಧಿಕಾರಿಗಳನ್ನು ನೇಮಿಸಿ ಕಾರ್ಯಪ್ರವೃತ್ತವಾಗಿದೆ.

ತಹಶೀಲ್ದಾರ್ ರಾಮಚಂದ್ರಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಬುಧವಾರ ಬೆಳಗ್ಗೆಯಿಂದಲೇ ತಮಗೆ ನೇಮಿಸಿದ ಪ್ರದೇಶಗಳಿಗೆ ಭೇಟಿ ನೀಡಿದರು. ಅಲ್ಲದೇ ಸರ್ಕಾರದ ಮಾರ್ಗಸೂಚಿಗಳನ್ವಯ ಪ್ರದೇಶದ ನಿವಾಸಿಗಳಿಗೆ ತೊಂದರೆಯಾಗದಂತೆ, ಅಗತ್ಯ ಸೌಕರ್ಯ ನೀಡುವ ಕಡೆ ಗಮನಹರಿಸಿದ್ರು.

ನಗರದ ಕೆಲವು ನಿಷೇಧಿತ ಪ್ರದೇಶಗಳಲ್ಲಿ ಕಸದ ರಾಶಿ ಕಂಡು ಜಿಲ್ಲಾಧಿಕಾರಿ ಬೇಸರ ವ್ಯಕ್ತಪಡಿಸಿದ್ದರು. ನಗರಸಭೆಯ ಅಧಿಕಾರಿಗಳು ಎಲ್ಲಾ ಕಂಟೈನ್‌​ಮೆಂಟ್ ಪ್ರದೇಶಗಳಲ್ಲಿ ಪೌರಕಾರ್ಮಿಕರೊಂದಿಗೆ ತೆರಳಿ ಸಂಪೂರ್ಣ ಸ್ವಚ್ಛಗೊಳಿಸಿದರು.

ABOUT THE AUTHOR

...view details