ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಶುರುವಾಗುತ್ತಿದ್ದಂತೆ ದಾಣಗೆರೆ ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ಗಳಿಗೆ ಮತ್ತೆ ಕಳೆ ಬಂದಿದೆ. ಹಿಂದೆ ಸಿದ್ದರಾಮಯ್ಯನ ಸರ್ಕಾರದಲ್ಲಿ ಕಡಿಮೆ ದರದಲ್ಲಿ ಬಡಜನರಿಗೆ ಊಟ ತಿಂಡಿ ಸಿಗಬೇಕೆಂಬ ಯೋಜನೆ ಆರಂಭಿಸಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ನಿರ್ಲಕ್ಷ್ಯಕ್ಕೊಳಪಟ್ಟಿತ್ತು. ಇದೀಗ ಮತ್ತೆ ಸಿದ್ದರಾಮಯ್ಯ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಇಂದಿರಾ ಕ್ಯಾಂಟೀನ್ಗಳಿಗೆ ಸೌಲಭ್ಯ ಒದಗಿಸಲು ಆದೇಶಿಸಿದ್ದು,ಬಡವರ ಹಸಿವು ತಣಿಸಲು ಜಿಲ್ಲೆಯಲ್ಲಿ ಕಾರ್ಯನಿರತವಾಗಿವೆ.
ದಾವಣಗೆರೆಯಲ್ಲಿ ಬಡಜನ ಹೆಚ್ಚು ವಾಸ ಮಾಡ್ತಿರುವುದರಿಂದ ನಗರದಲ್ಲಿ ಎಂಟು ಇಂದಿರಾ ಕ್ಯಾಂಟೀನ್ಗಳನ್ನು ತೆರೆಯಲಾಗಿತ್ತು. ಬಡವರ್ಗದ ಜನರು ಹೆಚ್ಚು ಕ್ಯಾಂಟೀನ್ ಆಹಾರಕ್ಕೆ ಹೊಂದಿಕೊಂಡಿದ್ದರು. ಇವರೆಲ್ಲ ಇಂದಿರಾ ಕ್ಯಾಂಟೀನ್ಗಳಲ್ಲಿ ಕಡಿಮೆ ದರದಲ್ಲಿ ಆಹಾರ ಸೇವಿಸಿ, ಸಿದ್ದರಾಮಯ್ಯ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ 2018ರಲ್ಲಿ ಆರಂಭವಾಗಿದ್ದ ಎಂಟು ಕ್ಯಾಂಟೀನ್ ಗಳನ್ನು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸರಾಗವಾಗಿ ನಡೆದುಕೊಂಡು ಹೋಗ್ತಿದ್ದವು. ಅದ್ರೇ 2018 ರಲ್ಲಿ ಸಮ್ಮಿಶ್ರ ಸರ್ಕಾರ ಬಳಿಕ ಬಿಜೆಪಿ ಸರ್ಕಾರ ಆಡಳಿತ ಬರುತ್ತಿದ್ದಂತೆ ಕ್ಯಾಂಟೀನ್ಗಳು ಮೂಲೆಗುಂಪಾಗಿದ್ದವು. ಹಿಂದಿನ ಸರ್ಕಾರ ಕ್ಯಾಂಟೀನ್ಗಳ ನಿರ್ವಹಣೆಗೆ ಹಣ ಇಲ್ಲವೆಂದಿದ್ದಕ್ಕೆ ಕೆಲ ಇಂದಿರಾ ಕ್ಯಾಂಟೀನ್ ಗಳು ಮುಚ್ಚಲ್ಪಟ್ಟಿದ್ದವು.
ಇನ್ನು ಕೆಲವು ಬೇಕೋ ಬೇಡ್ವೋ ಎಂಬಂತೆ ನಡೆದುಕೊಂಡು ಬಂದಿದ್ದು, ಕಣ್ ಮುಂದೇನೆ ಆಗಿದೆ. ಅದೇ ಇದೀಗ ಬಡ ವರ್ಗದ ಜನ ಕಡಿಮೆ ಹಣದಲ್ಲಿ ಊಟ ಮಾಡುವ ಅವಕಾಶ ಮತ್ತೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಒದಗಿಸಿದ್ದಾರೆ. ಅದರ ಬೆನ್ನಲ್ಲೆ ಇನ್ನೂ ದಾವಣಗೆರೆ ನಗರದ ಎಂಟು ಕ್ಯಾಂಟೀನ್ಗಳು ಮತ್ತೆ ಆರಂಭಗೊಂಡು ಬಡವರ್ಗದ ಜನರಿಗೆ ಸಾಥ್ ನೀಡಲಿವೆ.