ಕರ್ನಾಟಕ

karnataka

ETV Bharat / state

'ಕರ್ನಾಟಕ'ಕ್ಕೆ 50 ವರ್ಷ: ದಾವಣಗೆರೆ ಯುವಕ ರಚಿಸಿದ ಲಾಂಛನ ಆಯ್ಕೆ

ಮೈಸೂರು ರಾಜ್ಯ 'ಕರ್ನಾಟಕ' ಎಂದು ಮರುನಾಮಕರಣಗೊಂಡು ನವೆಂಬರ್ 1ಕ್ಕೆ 50 ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಯುವಕ ವಿನ್ಯಾಸಗೊಳಿಸಿದ ವಿಶೇಷ ಲಾಂಛನವನ್ನು ಸರ್ಕಾರ ಆಯ್ಕೆ ಮಾಡಿದೆ.

ಲಾಂಛನ ಆಯ್ಕೆ
ಲಾಂಛನ ಆಯ್ಕೆ

By ETV Bharat Karnataka Team

Published : Oct 19, 2023, 10:18 PM IST

Updated : Oct 20, 2023, 10:38 AM IST

ದಾವಣಗೆರೆ ಯುವಕ ರಚಿಸಿದ ಲಾಂಛನ ಆಯ್ಕೆ

ದಾವಣಗೆರೆ:ಅಂದಿನ ರಾಜಮಹರಾಜರ ಕಾಲದ ಮೈಸೂರು ರಾಜ್ಯಕ್ಕೆ 'ಕರ್ನಾಟಕ' ಎಂದು ಮರು ನಾಮಕರಣವಾಗಿ ಇದೇ ನವೆಂಬರ್ 1ಕ್ಕೆ 50 ವರ್ಷ ಪೂರ್ಣಗೊಳ್ಳುತ್ತಿದೆ. ಈ ಸಂಭ್ರಮವನ್ನು ಇಡೀ ವರ್ಷ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧಾರ ಮಾಡಿದೆ.

ಕರ್ನಾಟಕ ಸಂಭ್ರಮ ಆಚರಿಸಲು ಕನ್ನಡ ಕಂಪಿನ ಲಾಂಛನದ ಅವಶ್ಯಕತೆ ಸರ್ಕಾರಕ್ಕಿತ್ತು. ಅದರಂತೆ ಲಾಂಛನ ತಯಾರು ಮಾಡಲು ಸಾರ್ವಜನಿಕರಿಗೆ ಅಹ್ವಾನ ನೀಡಿತ್ತು. ಕಳುಹಿಸಲಾದ ನೂರಾರು ಲಾಂಛನಗಳ ಪೈಕಿ ದಾವಣಗೆರೆಯ ಯುವಕ ತಯಾರು ಮಾಡಿದ ಲಾಂಛನವನ್ನು ಸರ್ಕಾರ ಆಯ್ಕೆ ಮಾಡಿ ಅನಾವರಣಗೊಳಿಸಿದೆ.

ಕರ್ನಾಟಕ ನಕ್ಷೆಯಲ್ಲಿ ಅಂಬಾರಿ ಹೊತ್ತು ಗಾಂಭೀರ್ಯದಿಂದ ನಡೆಯುತ್ತಿರುವ ಆನೆಯ ಚಿತ್ರವಿರುವ ವಿನ್ಯಾಸದ ಲಾಂಛನವನ್ನು ದಾವಣಗೆರೆಯ ಜಯನಗರದ ಎ ಬ್ಲಾಕ್ ನಿವಾಸಿ ರವಿರಾಜ ಜಿ. ಹುಲಗೂರು ವಿನ್ಯಾಸಗೊಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ಲಾಂಛನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹುಲಗೂರು ಅವರನ್ನು ಅಭಿನಂದಿಸಿದರು.

25,000 ರೂ. ಬಹುಮಾನ ಮೊತ್ತವನ್ನೂ ಪ್ರದಾನ ಮಾಡಿದ್ದು, ಬಿಬಿಎಂಪಿ ವತಿಯಿಂದ 1 ಲಕ್ಷ ರೂ, ಬಹುಮಾನ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ರವಿರಾಜ ಜಿ.ಹಲಗೂರು ವಿನ್ಯಾಸಗೊಳಿಸಿರುವ ಲಾಂಛನವನ್ನು ಸರ್ಕಾರ ಇಡೀ ಒಂದು ವರ್ಷ ಕನ್ನಡ ಪರ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಿದೆ.

ಲಾಂಛನದಲ್ಲಿ ಚಿಕ್ಕ ಬದಲಾವಣೆಗೆ ಸಿಎಂ ಸೂಚನೆ:ಕರ್ನಾಟಕ ಏಕೀಕರಣವಾಗಿ 50 ವರ್ಷ ತುಂಬುತ್ತಿದ್ದರಿಂದ ಲಾಂಛನ ವಿನ್ಯಾಸಗೊಳಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಈ ಲಾಂಛನದಲ್ಲಿ ಆನೆ ಮೇಲೆ ರಾಜನ ಬದಲಿಗೆ ಮೈಸೂರಿನ ಚಾಮುಂಡೇಶ್ವರಿ ಕೂತಿರುವಂತೆ ಬದಲಾವಣೆ ಮಾಡಪ್ಪಾ ಎಂದರು. ಈ ಬದಲಾವಣೆ ಮಾಡುವುದಾಗಿ ರವಿರಾಜ ಜಿ.ಹಲಗೂರು ಈಟಿವಿ ಭಾರತ್​ಗೆ ತಿಳಿಸಿದರು.

ರವಿರಾಜ ಜಿ. ಹಲಗೂರು ಪ್ರತಿಕ್ರಿಯೆ:"ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಲಾಂಛನ ವಿನ್ಯಾಸ ಮಾಡಲು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ಅದನ್ನು ನೋಡಿ ನಾನು ಲಾಂಛನ ತಯಾರು ಮಾಡಿದ್ದೇನೆ. ಸರ್ಕಾರ ಆಯ್ಕೆ ಮಾಡಿದೆ. ಅವರೇ ಕರೆ ಮಾಡಿ ಮಾಹಿತಿ ನೀಡಿದ್ದು ಬಹಳ ಸಂತಸ ತಂದಿದೆ".

ಕುಟುಂಬಸ್ಥರ ಹೇಳಿಕೆ:ರವಿರಾಜ ಜಿ.ಹಲಗೂರು ಅವರ ಮಾವ ಕೃಷ್ಣ ಪ್ರತಿಕ್ರಿಯಿಸಿ, "ನಮ್ಮ ಅಳಿಯ ರವಿರಾಜ ಲಾಂಛನ ತಯಾರು ಮಾಡಿರುವುದು ಸಂತಸ ತಂದಿದೆ. ರಾಜ್ಯ ಸರ್ಕಾರ ಅದಕ್ಕೆ ಪ್ರಥಮ ಬಹುಮಾನ ಘೋಷಣೆ ಮಾಡಿದೆ. ಲಾಂಛನ ಇಡೀ ಒಂದು ವರ್ಷ ಸರ್ಕಾರ ಕನ್ನಡ ಪರ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಿದೆ. ಸರ್ಕಾರದಿಂದ 25 ಸಾವಿರ ಮೊತ್ತದ ಚೆಕ್ ನೀಡಲಾಗಿದ್ದು, ಬಿಬಿಎಂಪಿಯಿಂದ 1 ಲಕ್ಷ ಮೊತ್ತವನ್ನು ಘೋಷಣೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದು ಸಂತಸಪಟ್ಟರು.

ಇದನ್ನೂ ಓದಿ:ಇಡೀ ವರ್ಷ ಕರ್ನಾಟಕ 50ರ ಸಂಭ್ರಮಾಚರಣೆಗೆ ನಿರ್ಧಾರ : ಡಿಸಿಎಂ ಡಿ.ಕೆ.ಶಿವಕುಮಾರ್

Last Updated : Oct 20, 2023, 10:38 AM IST

ABOUT THE AUTHOR

...view details