ಕರ್ನಾಟಕ

karnataka

ಹರಿಹರದಲ್ಲಿ ಭಾನುವಾರ ಒಂದೇ ದಿನ 10 ಮಂದಿಗೆ ಸೋಂಕು

By

Published : Jul 12, 2020, 11:38 PM IST

ತಾಲೂಕು ಆಡಳಿತ, ಆರೋಗ್ಯ ಇಲಾಖೆ, ನಗರಸಭೆ. ಪೊಲೀಸ್ ಇಲಾಖೆಗಳು ಪಾಸಿಟಿವ್ ಹೊಂದಿರುವ ವ್ಯಕ್ತಿಗಳು ಇರುವ ಪ್ರದೇಶಕ್ಕೆ ತೆರಳಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿವೆ. ಬಳಿಕ ಅವರ ಮನೆಯ 50 ಮೀಟರ್ ಸುತ್ತಳತೆ ನಿಷೇಧಿತ ಪ್ರದೇಶ ವಲಯ ಎಂದು ಬ್ಯಾರಿಕೇಡ್ ಹಾಕುವ ಮೂಲಕ ಜನಸಂಚಾರವನ್ನು ನಿರ್ಬಂಧಿಸಲಾಗಿದೆ.

harihara
harihara

ಹರಿಹರ: ಹರಿಹರ ತಾಲೂಕಿನಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಹೆಚ್ಚಾಗುತ್ತಿರುವುದರಿಂದ ಜನರಲ್ಲಿ ಆತಂಕ ಮೂಡಿದೆ. ತಾಲೂಕಿನಲ್ಲಿ ಭಾನುವಾರ ಒಂದೇ ದಿನ 10 ಪಾಸಿಟಿವ್ ಕೇಸ್ ದೃಢಪಟ್ಟಿದ್ದು, ಇಲ್ಲಿಯವರೆಗೂ ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ 57ಕ್ಕೆ ಏರಿದೆ.

ನಗರದ ಶಿವಮೊಗ್ಗ ರಸ್ತೆಯ ಪಾಟಿದಾರ್ ಸಾ ಮಿಲ್​​ನ 32 ವರ್ಷದ ಪುರುಷ, ಹಳ್ಳದಕೇರಿ 12ವರ್ಷದ ಬಾಲಕ ಹಾಗೂ 32 ವರ್ಷದ ಮಹಿಳೆ, ಶಿವಮೊಗ್ಗ ರಸ್ತೆಯ ಔಷಧಿ ಅಂಗಡಿ 35 ವರ್ಷದ ಪುರುಷ, ಕುಂಬಾರ ಒಣಿಯ 10 ವರ್ಷದ ಬಾಲಕಿ, ಆಂಜನೇಯ ಬಡಾವಣೆಯ 26 ವರ್ಷದ ಪುರುಷ, ಟಿಪ್ಪು ನಗರದ 32 ವರ್ಷದ ಮಹಿಳೆ, ಇಂದಿರಾನಗರದ 55 ವರ್ಷದ ಪುರುಷ, ನಗರದ ಸರ್ಕಾರಿ ಆಸ್ಪತ್ರೆಯ ಸಮೀಪದ 40 ವರ್ಷದ ಪುರುಷ ಹಾಗೂ ತಾಲೂಕಿನ ಕೊಂಡಜ್ಜಿ ಗ್ರಾಮದ ನಿವಾಸಿಯಾದ 24 ವರ್ಷದ ಮಹಿಳೆ ಇವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಸೋಂಕಿತರಲ್ಲಿ ನಗರದ 9 ಜನರ ಗಂಟಲು ದ್ರವವನ್ನು ಜುಲೈ 2 ರಂದು ಹಾಗೂ ಕೊಂಡಜ್ಜಿ ಗ್ರಾಮದ ಮಹಿಳೆಯ ಗಂಟಲು ದ್ರವವನ್ನು ಜು 7 ರಂದು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಜು.12 ರಂದು ಬಂದ ವರದಿಯಲ್ಲಿ ಪಾಸಿಟಿವ್ ಎಂದು ದೃಢಪಟ್ಟಿದೆ. ತಾಲೂಕು ಆಡಳಿತ, ಆರೋಗ್ಯ ಇಲಾಖೆ, ನಗರಸಭೆ, ಪೊಲೀಸ್ ಇಲಾಖೆಗಳು ಪಾಸಿಟಿವ್ ಹೊಂದಿರುವ ವ್ಯಕ್ತಿಗಳು ಇರುವ ಏರಿಯಾಕ್ಕೆ ಹಾಗೂ ಗ್ರಾಮಕ್ಕೆ ತೆರಳಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿ, ಅವರ ಮನೆಯ 50 ಮೀಟರ್ ಸುತ್ತಳತೆ ನಿಷೇಧಿತ ಪ್ರದೇಶ ವಲಯ ಎಂದು ಬ್ಯಾರಿಕೇಡ್ ಹಾಕುವ ಮೂಲಕ ಜನರನ್ನು ಸಂಚಾರ ಮಾಡದಂತೆ ನಿರ್ಬಂಧಿಸಲಾಯಿತು.

ABOUT THE AUTHOR

...view details