ಕರ್ನಾಟಕ

karnataka

ETV Bharat / state

ಪುತ್ತೂರು: ಮಹಿಳಾ ಪೊಲೀಸ್ ಠಾಣೆಯ ಎಸ್​​​ಐ, ಹೆಡ್ ‌ಕಾನ್ಸ್​ಟೇಬಲ್​​​ ಸೇರಿ ಐವರಿಗೆ ಕೊರೊನಾ! - putturu women police station

ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಲೇ ಬರುತ್ತಿದ್ದು, ಇದೀಗ ಪುತ್ತೂರು ಠಾಣೆಯ ಎಸ್​ಐ, ಹೆಡ್ ‌ಕಾನ್ಸ್​ಟೇಬಲ್​​ ಸೇರಿ ತಾಲೂಕಿನಲ್ಲಿ ಐವರಿಗೆ ಸೋಂಕು ದೃಢವಾಗಿದೆ.

corona
ಕೊರೊನಾ.

By

Published : Jul 13, 2020, 2:04 PM IST

ಪುತ್ತೂರು: ನಗರದ ಮಹಿಳಾ ಪೊಲೀಸ್ ಠಾಣೆಯ ಎಸ್​​​ಐ ಹಾಗೂ ಅವರ 22 ವರ್ಷದ ಪುತ್ರಿ ಮತ್ತು ಹೆಡ್ ‌ಕಾನ್ಸ್​ಟೇಬಲ್​​ ಸೇರಿದಂತೆ ಕಡಬ ಉಭಯ ತಾಲೂಕಿನಲ್ಲಿ 5 ಮಂದಿಗೆ ಕೊರೊನಾ ದೃಢಪಟ್ಟಿದೆ.

ಮೂರು ದಿನಗಳ ಹಿಂದೆ ನಗರ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​ಗೆ ಕೊರೊನಾ ದೃಢವಾಗಿತ್ತು. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಿನ್ನೆಲೆ ಮಹಿಳಾ ಪೊಲೀಸ್ ಠಾಣೆಯ ಎಸ್​​ಐ ಹೋಮ್ ಕ್ವಾರಂಟೈನ್‌ನಲ್ಲಿದ್ದರು. ಇದೀಗ ಅವರ ಪುತ್ರಿಗೂ ಸೋಂಕು ತಗುಲಿದೆ.

ಮಹಿಳಾ ಪೊಲೀಸ್ ಠಾಣೆ

ಮೊದಲ ಸಂಡೇ ಲಾಕ್​ಡೌನ್​​ ಸಂದರ್ಭ ಮಹಿಳಾ ಠಾಣೆಯ ಎಸ್​​ಐ ಮತ್ತು ಸಿಬ್ಬಂದಿ ಲಾಕ್‌ಡೌನ್ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬರ ವಿಚಾರಣೆಗೆ ಹೋಗಿದ್ದರು. ಈ ವೇಳೆ ಠಾಣೆಯ ಕಾನ್ಸ್​ಟೇಬಲ್​​ ಆರೋಪಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ನಂತರ ಸಿಬ್ಬಂದಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಉಳಿದ ಪೊಲೀಸರು ಸಹ ಹೋಮ್‌ ಕ್ವಾರಂಟೈನ್ ಆಗಿದ್ದರು.

ಇದೀಗ ಹೋಮ್ ಕ್ವಾರಂಟೈನ್ ಆಗಿದ್ದವರ ಪೈಕಿ ಎಸ್​​ಐಗೆ ಮತ್ತು ಕಾನ್ಸ್​ಟೇಬಲ್​ಗೆ ಕೊರೊನಾ ದೃಢಪಟ್ಟಿದೆ. ಈ ಹಿಂದೆ ಮಹಿಳಾ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​ವೊಬ್ಬರಿಗೂ ಸೋಂಕು ದೃಢಪಟ್ಟಿತ್ತು. ಇದೀಗ ಅವರು ಚೇತರಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.

ನಗರಸಭೆ ವ್ಯಾಪ್ತಿಯ ಕೆಮ್ಮಿಂಜೆ ಗ್ರಾಮದ 55 ವರ್ಷದ ವ್ಯಕ್ತಿ ಹಾಗೂ ಕಡಬ ತಾಲೂಕಿನ 34 ವರ್ಷದ ಯುವಕನೊಬ್ಬನಲ್ಲಿ ಸೋಂಕು ದೃಢಪಟ್ಟಿದೆ.

ABOUT THE AUTHOR

...view details