ಮಂಗಳೂರು: ಇಲ್ಲಿನ ಟೈಲ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಯುವಕನೊಬ್ಬ ನಾಪತ್ತೆಯಾದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಪ.ಬಂಗಾಳ ಕಾರ್ಮಿಕ ನಾಪತ್ತೆ - missing young boy in mangalore
ಮಂಗಳೂರಿನ ಟೈಲ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಯುವಕ ನಾಪತ್ತೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
west-bengal-based-labor-missing-at-mangalore
ಪಶ್ಚಿಮ ಬಂಗಾಳ ನಿವಾಸಿ ಎಸ್.ಕೆ.ಇಲ್ಯಾಸ್ ಅಲಿ (27) ನಾಪತ್ತೆಯಾದ ಯುವಕ. ಎಸ್ ಕೆ ಇಲ್ಯಾಸ್ ಅಲಿ ಮತ್ತು ಅವರ ಸಹೋದರ ಜಕಾರಿಯ ಅಲಿ ಎಂಬುವರು ಅಹ್ಮದ್ ಅಲಿಯವರ ಜೊತೆಯಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದರು. ಜ.27ರಂದು ರೈಲ್ವೆ ಪಾರ್ಕಿಂಗ್‌ನಿಂದ ಎಸ್.ಕೆ. ಇಲ್ಯಾಸ್ ಅಲಿಯು ಅಹ್ಮದ್ ಅಲಿ ಅವರಿಂದ ಹಣ ಪಡೆದುಕೊಂಡು ಪಶ್ಚಿಮ ಬಂಗಾಳದ ಮೆದಿನಿಪುರಕ್ಕೆ ಹೋಗಿದ್ದರು. ಆದರೆ ಬಳಿಕ ಅವರು ನಾಪತ್ತೆಯಾಗಿದ್ದಾರೆ.
ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.