ಕರ್ನಾಟಕ

karnataka

ETV Bharat / state

ಮಂಗಳೂರಿನ ನೂತನ ಮಾರುಕಟ್ಟೆಯಲ್ಲಿ ಗೋಮಾಂಸದ ಅಂಗಡಿಗೆ ಅವಕಾಶ ನೀಡದಂತೆ ವಿಹಿಂಪ ಆಗ್ರಹ

ಗೋವಧೆಗೆ ಸಂಪೂರ್ಣ ನಿಷೇಧ ಇರುವಾಗ ಆ ಅಂಗಡಿಗಳು ಹೇಗೆ ಬರುತ್ತದೆ. ಗೋ ಹತ್ಯೆ ಮಾಡದೇ ಮಾಂಸ ಮಾರಲು‌ ಸಾಧ್ಯವಿಲ್ಲ. ತಾತ್ವಿಕವಾಗಿ ನಮ್ಮ ವಿರೋಧವಿದೆ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.

vhp-demands-not-to-allow-beef-shop-in-mangaluru-market
ಮಂಗಳೂರಿನ ನೂತನ ಮಾರುಕಟ್ಟೆಯಲ್ಲಿ ಗೋಮಾಂಸದ ಅಂಗಡಿಗೆ ಅವಕಾಶ ನೀಡದಂತೆ ವಿಹಿಂಪ ಆಗ್ರಹ

By

Published : Nov 7, 2022, 8:15 PM IST

ಮಂಗಳೂರು:ನಗರದ ಹಂಪನಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೇಂದ್ರ ಮಾರುಕಟ್ಟೆಯಲ್ಲಿ ಗೋಮಾಂಸ ಮಾರಾಟದ ಅಂಗಡಿ ಅವಕಾಶ ನೀಡಲಾಗುತ್ತಿದೆ ಎಂದು ವಿವಾದ ಹಬ್ಬಿದ್ದು, ಇದಕ್ಕೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.

ಮಂಗಳೂರಿನ ಹಳೆಯ ಕೇಂದ್ರ ಮಾರುಕಟ್ಟೆಯನ್ನು ಎರಡು ವರ್ಷಗಳ ಹಿಂದೆ ನೆಲಸಮಗೊಳಿಸಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನೂತನ ಕೇಂದ್ರ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. ಈ ಮಾರುಕಟ್ಟೆಯಲ್ಲಿ ಗೋಮಾಂಸದ ಅಂಗಡಿ​ಗೆ ಅವಕಾಶ ಇದೆ ಎಂದು ಆಕ್ಷೇಪ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಬೀಫ್ ಸ್ಟಾಲ್​ಗೆ ಅವಕಾಶ ನೀಡದಂತೆ ಆಗ್ರಹಿಸಿದೆ. ಬಿಜೆಪಿ ಆಡಳಿತವಿರುವ ಪಾಲಿಕೆಯಲ್ಲಿ ಬೀಫ್​​ ಸ್ಟಾಲ್​ಗೆ ಅವಕಾಶ ನೀಡಲಾಗುತ್ತಿದೆ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ವಿಶ್ವ ಹಿಂದೂ ಪರಿಷತ್​ನಿಂದ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಕೇಂದ್ರ ಮಾರುಕಟ್ಟೆಯಲ್ಲಿ 9 ಬೀಫ್ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿರುವುದು ಗಮನಕ್ಕೆ ಬಂದಿದ್ದು, ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದೆ.

ವಿಹಿಂಪ ಮನವಿ

ವಿಹಿಂಪ ರಾಜ್ಯ ಮುಖಂಡ ಎಂ.ಬಿ ಪುರಾಣಿಕ್ ಮಾತನಾಡಿ, 'ಗೋವಧೆಗೆ ಸಂಪೂರ್ಣ ನಿಷೇಧ ಇರುವಾಗ ಆ ಅಂಗಡಿಗಳು ಹೇಗೆ ಬರುತ್ತದೆ. ಗೋ ಹತ್ಯೆ ಮಾಡದೇ ಮಾಂಸ ಮಾರಲು‌ ಸಾಧ್ಯವಿಲ್ಲ. ತಾತ್ವಿಕವಾಗಿ ನಮ್ಮ ವಿರೋಧವಿದೆ' ಎಂದು ತಿಳಿಸಿದ್ದಾರೆ.

ಮಂಗಳೂರು ಮೇಯರ್ ಜಯಾನಂದ ಅಂಚನ್ ಅವರು, 'ಕೇಂದ್ರ ಮಾರುಕಟ್ಟೆಯ ನಿರ್ಮಾಣ ಕೆಲಸ ಇನ್ನಷ್ಟೆ ಪ್ರಾರಂಭಿಸಬೇಕಾಗಿದೆ. ಯಾವುದೇ ಮಾಂಸದಂಗಡಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಸಿ ಅನುಮತಿ ನೀಡಿರುವುದಿಲ್ಲ' ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ದಲಿತ ಹೋರಾಟಗಾರ ಡೀಕಯ್ಯ ಅಸಹಜ ಸಾವು ಪ್ರಕರಣ; ಸಿಐಡಿಗೆ ವಹಿಸಿದ ರಾಜ್ಯ ಸರ್ಕಾರ

ABOUT THE AUTHOR

...view details