ಕರ್ನಾಟಕ

karnataka

ETV Bharat / state

ಸೂಟ್​​​​ಕೇಸ್​ ಅಡಿಯಲ್ಲಿಟ್ಟು ಚಿನ್ನ ಸಾಗಣೆ: ಮಂಗಳೂರು ಏರ್​ಪೋರ್ಟ್​​ನಲ್ಲಿ ಇಬ್ಬರ ಬಂಧನ - ಇಬ್ಬರ ಬಂಧನ

ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

Two arrested in Mangaluru Airport
ಅಕ್ರಮ ಚಿನ್ನ ಸಾಗಾಟ

By

Published : Jul 15, 2021, 1:37 PM IST

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಕೇರಳ ರಾಜ್ಯದ ಉಪ್ಪಳದ ಮೊಹಮ್ಮದ್ ಅನ್ಸಾರ್ ಕಯ್ಯಾರ್ (34) ಮತ್ತು ಕೊಝಿಕೋಡ್​ನ ಮೊಹಮ್ಮದ್ ಮೂಸ ಮಿಯಾಸ್ (18) ಬಂಧಿತರು. ಇವರು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ತಪಾಸಣೆ ನಡೆಸಿದಾಗ ಸೂಟ್​​​​ಕೇಸ್​ನ ಕೆಳಭಾಗದಲ್ಲಿ ಚಿನ್ನವನ್ನು ಪೌಡರ್ ರೂಪದಲ್ಲಿ ಅಡಗಿಸಿ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.

ಓದಿ : ಮಂಗಳೂರಿನಲ್ಲಿ ಹಲ್ಲೆ ನಡೆಸಿ ಮುಂಬೈ ಸೇರಿದ್ದ ಆರೋಪಿ: 16 ವರ್ಷಗಳ ಬಳಿಕ ಬಂಧನ

ಆರೋಪಿಗಳಿಂದ 703 ಗ್ರಾಂ. ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 34,46,464 ರೂಪಾಯಿ ಎಂದು ಅಂದಾಜಿಸಲಾಗಿದೆ. ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ABOUT THE AUTHOR

...view details