ಮಂಗಳೂರು: ಕಂಬಳದಲ್ಲಿ ಕೋಣಗಳೊಂದಿಗೆ ದಾಖಲೆಯ ಓಟ ಓಡಿದ ಶ್ರೀನಿವಾಸ ಗೌಡ ನಾಳೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಲಿದ್ದಾರೆ.
ಶ್ರೀನಿವಾಸ ಗೌಡ ನಗರದ ಐಕಳ ಎಂಬಲ್ಲಿ ಫೆ.1ರಂದು ನಡೆದ ಕಂಬಳದಲ್ಲಿ 142.50 ಮೀಟರ್ ಉದ್ದದ ಕಂಬಳದ ಕರೆಯನ್ನು ಕೇವಲ 13.62 ಸೆಕೆಂಡ್ನಲ್ಲಿ ಕ್ರಮಿಸಿದ್ದರು. ಕಂಬಳದಲ್ಲಿ ಇದುವರೆಗೆ ಯಾರೂ ಮಾಡದ ದಾಖಲೆಯನ್ನು ಶ್ರೀನಿವಾಸ ಗೌಡ ದಾಖಲಿಸಿದ್ದರು. ಇದು ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದ್ದರಿಂದ ನಾಳೆ ಸಿಎಂ ಯಡಿಯೂರಪ್ಪ ಹಾಗೂ ಕ್ರೀಡಾ ಸಚಿವ ಸಿ.ಟಿ.ರವಿಯವರು ಶ್ರೀನಿವಾಸ ಗೌಡರನ್ನು ಬೆಂಗಳೂರಿಗೆ ಬರಮಾಡಿಕೊಂಡಿದ್ದು, ನಾಳೆ 3.30ಗೆ ಭೇಟಿ ಮಾಡಲಿದ್ದಾರೆ.
ಶ್ರೀನಿವಾಸ ಗೌಡ ಅವರು ಕಂಬಳದಲ್ಲಿ ದಾಖಲೆ ಮಾಡಿರುವ ವಿಷಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಇದನ್ನು ಗಮನಿಸಿದ ಆನಂದ್ ಮಹೀಂದ್ರಾ ಈ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರಿಗೆ ಟ್ವೀಟ್ ಮಾಡಿದ್ದರು. ಇದರಿಂದ ಕಿರಣ್ ರಿಜಿಜು ಅವರು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಕರೆಸಿ ತರಬೇತಿ ನೀಡುವುದಾಗಿ ಹೇಳಿ ಕೊಂಡಿದ್ದಾರೆ.
ಈ ಬಗ್ಗೆ ಕಂಬಳ ಅಕಾಡೆಮಿಯ ಸ್ಥಾಪಕ ಗುಣಪಾಲ ಕಡಂಬ ಪ್ರತಿಕ್ರಿಯಿಸಿ, ಶ್ರೀನಿವಾಸ ಗೌಡ ನಮ್ಮ ಕಂಬಳ ಅಕಾಡೆಮಿಯ ಮೊದಲ ಬ್ಯಾಚ್ ವಿದ್ಯಾರ್ಥಿ. ಅವರ ಸಾಧನೆ ಬಗ್ಗೆ ನಮಗೆ ಹೆಮ್ಮೆಯಿದೆ. ಶ್ರೀನಿವಾಸ ಗೌಡರ ಸಾಧನೆಗೆ ದೇಶದ ಎಲ್ಲ ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ನಾಳೆ ಸಿಎಂ ಹಾಗೂ ರಾಜ್ಯ ಕ್ರೀಡಾ ಸಚಿವರನ್ನು ಭೇಟಿ ಮಾಡಲಿದ್ದೇವೆ. ಅಲ್ಲದೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರೂ ಶ್ರೀನಿವಾಸ ಗೌಡರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿ, ದೆಹಲಿಗೆ ಕರೆಸಿಕೊಂಡಿದ್ದಾರೆ.
ನಾಳೆ ಬಿಎಸ್ವೈ ಭೇಟಿ ಮಾಡಲಿರುವ ತುಳುನಾಡ ಉಸೇನ್ ಬೋಲ್ಟ್! - ಬಿಎಸ್ವೈ ಭೇಟಿ ಮಾಡಲಿರುವ ಕಂಬಳವೀರ ಶ್ರೀನಿವಾಸ ಗೌಡ
ಕಂಬಳದಲ್ಲಿ ಕೋಣಗಳೊಂದಿಗೆ ದಾಖಲೆಯ ಓಟ ಓಡಿದ ಶ್ರೀನಿವಾಸ ಗೌಡ ನಾಳೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಲಿದ್ದಾರೆ. ಮಂಗಳೂರಿನ ಐಕಳ ಎಂಬಲ್ಲಿ ಫೆ.1ರಂದು ನಡೆದ ಕಂಬಳದಲ್ಲಿ 142.50 ಮೀಟರ್ ಉದ್ದದ ಕಂಬಳದ ಕರೆಯನ್ನು ಕೇವಲ 13.62 ಸೆಕೆಂಡ್ನಲ್ಲಿ ಕ್ರಮಿಸಿ ಕಂಬಳದಲ್ಲಿ ಇದುವರೆಗೆ ಯಾರೂ ಮಾಡದ ದಾಖಲೆಯನ್ನು ಶ್ರೀನಿವಾಸ ಗೌಡ ದಾಖಲಿಸಿದ್ದರು.
ಕಂಬಳವೀರ ಶ್ರೀನಿವಾಸ ಗೌಡ
ಆದರೆ ಈಗಾಗಲೇ ಮೂರು ಕಂಬಳಕ್ಕೆ ಶ್ರೀನಿವಾಸ ಗೌಡ ಅವರು ಒಪ್ಪಂದ ಮಾಡಿಕೊಂಡಿರುವುದರಿಂದ ಅವರು ಮಾರ್ಚ್ 7ರವರೆಗೆ ಹೋಗಲು ಸಾಧ್ಯವಾಗೋದಿಲ್ಲ. ಅಲ್ಲದೆ ಕಿರಣ್ ರಿಜಿಜು ಅವರು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಕರೆಸಿ ತರಬೇತಿ ನೀಡುವುದಾಗಿ ಹೇಳಿಕೊಂಡಿದ್ದಾರೆ. ಇದರಿಂದ ಇನ್ನಷ್ಟು ತರಬೇತಿ ಅಗತ್ಯ. ಜೊತೆಗೆ ನಿರಂತರವಾಗಿ ಕಂಬಳದಲ್ಲಿ ಭಾಗವಹಿಸಿರುವ ಕಾರಣ ಅವರಿಗೆ ಒಂದಷ್ಟು ವಿಶ್ರಾಂತಿಯ ಅಗತ್ಯವೂ ಇದೆ. ಆದ್ದರಿಂದ ನಾವು ಕಿರಣ್ ರಿಜಿಜು ಅವರನ್ನು ಮಾರ್ಚ್ 10ರ ಬಳಿಕ ಭೇಟಿ ಮಾಡಲಿದ್ದೇವೆ. ಈ ಬಗ್ಗೆ ನಾಳೆ ಸಿಎಂ ಅವರಲ್ಲಿ ಮಾತನಾಡುತ್ತೇವೆ ಎಂದರು.