ಮಂಗಳೂರು: ಕಳೆದ ಏಳು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ಕೊನೆಗೂ ಬಂದ್ ಆಗಿದ್ದು, ಹೋರಾಟಗಾರರಿಂದ ಸಂಭ್ರಮಾಚರಣೆ ನಡೆದಿದೆ.
ಸುರತ್ಕಲ್ನ ಟೋಲ್ ಗೇಟ್ ವಿರುದ್ಧ ಕಳೆದ ಆರು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ನವೆಂಬರ್ನಲ್ಲಿ ಟೋಲ್ಗೇಟ್ ವಿರುದ್ಧ ಮುತ್ತಿಗೆ ಹಾಕಿ ಕೆಲಹೊತ್ತು ಟೋಲ್ ಸಂಗ್ರಹ ನಿಲ್ಲಿಸಲು ಹೋರಾಟಗಾರರು ಯಶಸ್ವಿಯಾಗಿದ್ದರು. ಆ ಬಳಿಕ ಹಗಲು ರಾತ್ರಿ ಅನಿರ್ಧಿಷ್ಠಾವಧಿ ಧರಣಿ ಆರಂಭಿಸಿದ್ದರು. ಇಂದಿನವರೆಗೂ ಧರಣಿ ಮುಂದುವರಿದಿದೆ.
ಸುರತ್ಕಲ್ ಟೋಲ್ ಗೇಟ್ ಕೊನೆಗೂ ಬಂದ್.. ಹೋರಾಟಗಾರರಿಂದ ಸಂಭ್ರಮಾಚರಣೆ, ಮೊಳಗಿತು ಕ್ರಾಂತಿಗೀತೆ ಬುಧವಾರ ರಾತ್ರಿ 12 ಗಂಟೆಯವರೆಗೆ ಟೋಲ್ ಸಂಗ್ರಹ ನಡೆದಿದ್ದು, ಆ ಬಳಿಕ ಬಂದ್ ಮಾಡಲಾಗಿದೆ. ಈ ಹಿನ್ನೆಲೆ ಟೋಲ್ಗೇಟ್ ಬಳಿ ಧರಣಿ ನಡೆಸುತ್ತಿರುವ ಹೋರಾಟಗಾರರು ಸಂಭ್ರಮಾಚರಣೆ ನಡೆಸಿದ್ದಾರೆ. ಕೇಕ್ ಕತ್ತರಿಸಿ, ಸಿಹಿ ತಿಂಡಿ ಹಂಚಿ, ಪಟಾಕಿ ಸಿಡಿಸಿ, ಕ್ರಾಂತಿಗೀತೆಗಳನ್ನು ಹಾಡಿ ಕುಣಿದು ಕುಪ್ಪಳಿಸಿದ್ದಾರೆ. ಧರಣಿ ಸಮಾರೋಪ ಸಂಜೆ ಸಂಭ್ರಮಾಚರಣೆಯೊಂದಿಗೆ ಜರುಗಲಿದೆ.
ಇದನ್ನೂ ಓದಿ:ಡಿ.1ರಿಂದ ಸುರತ್ಕಲ್ ಟೋಲ್ ಗೇಟ್ನಲ್ಲಿ ಸುಂಕ ವಸೂಲಾತಿ ರದ್ದು: ಡಿಸಿ ಆದೇಶ