ಮಂಗಳೂರು:ಹೊಳೆಯಲ್ಲಿ ತೇಲಿ ಬಂದ ತೆಂಗಿನಕಾಯಿ ಹಿಡಿಯಲು ಹೋದ ವ್ಯಕ್ತಿ ಕಾಲುಜಾರಿ ಹೊಳೆಗೆ ಬಿದ್ದು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಚಿಕ್ಕಮುಡ್ನೂರಿನ ಅಂದ್ರಾಟ್ ಎಂಬಲ್ಲಿ ನಡೆದಿದೆ.
ಪರಲೋಕಕ್ಕೆ ಕಳಿಸಿದ ನಾರಿಕೇಳ... ಹೊಳೆಯಲ್ಲಿ ತೆಂಗಿನಕಾಯಿ ಹಿಡಿಯಲು ಹೋದಾತ ನೀರುಪಾಲು
ಪುತ್ತೂರು ಆರ್ಲಪದವು ನಿವಾಸಿಯೋರ್ವ ಹೊಳೆಯಲ್ಲಿ ತೇಲಿ ಬಂದ ತೆಂಗಿನಕಾಯಿ ಹಿಡಿಯಲು ಹೋಗಿ ಕಾಲುಜಾರಿ ಹೊಳೆಗೆ ಬಿದ್ದು ಸಾವನ್ನಪ್ಪಿದ್ದಾನೆ.
ಪುತ್ತೂರು ಆರ್ಲಪದವು ನಿವಾಸಿ ಜನಾರ್ದನ್ (30) ಮೃತ ವ್ಯಕ್ತಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆರೆ ನೀರಿಗೆ ಬಿದ್ದು ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೇರಿದೆ.
ಜನಾರ್ದನ್ ಅವರು ಚಿಕ್ಕಮುಡ್ನೂರಿನ ಅಂದ್ರಾಟ್ ಎಂಬಲ್ಲಿ ಕೃಷ್ಣಮೂರ್ತಿ ಎಂಬವರ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.
ಈತ ಕೆಲಸ ಮಾಡುತ್ತಿದ್ದ ಜಾಗದ ಪಕ್ಕದಲ್ಲಿ ಇರುವ ಬೆದ್ರಾಳ ಹೊಳೆಯಲ್ಲಿ ಮಳೆ ನೀರಿನೊಂದಿಗೆ ಬರುತ್ತಿದ್ದ ತೆಂಗಿನಕಾಯಿ ಹಿಡಿಯಲು ಹೋಗಿ ಆಯತಪ್ಪಿ ಹೊಳೆಗೆ ಬಿದ್ದು ಮಳೆಯ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಇನ್ನೂ ಮೃತದೇಹ ಪತ್ತೆಯಾಗಿಲ್ಲ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.