ಕಡಬ:ಇಲ್ಲಿನ ಪರಿಸರದಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ಸತೀಶ್ ಎಂಬುವವರು ಸೋಮವಾರ ನಿಧನರಾಗಿದ್ದಾರೆ.
ಕಡಬದಲ್ಲಿ ಹಲವು ವರ್ಷಗಳಿಂದ ಅಲೆದಾಡುತ್ತಿದ್ದ ಭಿಕ್ಷುಕ ಮೃತ.. - ತುಮಕೂರು ಮೂಲದ ಸತೀಶ್ ಎಂಬುವವರು ಮೃತ್ಯು
ಭಿಕ್ಷಾಟನೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ತುಮಕೂರು ಮೂಲದ ಸತೀಶ್ ಎಂಬುವವರು ಕಡಬದಲ್ಲಿ ಸೋಮವಾರದಂದು ನಿಧನರಾಗಿದ್ದಾರೆ.
ಕಡಬದಲ್ಲಿ ಹಲವು ವರ್ಷಗಳಿಂದ ಅಲೆದಾಡುತ್ತಿದ್ದ ಭಿಕ್ಷುಕ ಮೃತ.
ತುಮಕೂರು ನಿವಾಸಿ ಸತೀಶ್, ಕಡಬದ ಟೋಮ್ ಬಝಾರ್ ಕಟ್ಟಡದ ಬಳಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಕಡಬ ಪರಿಸರದಲ್ಲಿ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ಈತ ಸುಮಾರು 10 ವರ್ಷಗಳ ಹಿಂದೆ ಇಲ್ಲಿಗೆ ಆಗಮಿಸಿದ್ದರು. ಈ ಹಿಂದೆ ಈತನ ಮನೆಯವರು ಕಡಬಕ್ಕೆ ಆಗಮಿಸಿ ಕುಶಲೋಪರಿ ವಿಚಾರಿಸಿದ್ದರು.
ಸೋಮವಾರದಂದು ನಿಧನರಾದ ಇವರ ಮೃತದೇಹವನ್ನು ಮಹಜರು ನಡೆಸಿ ಟೋಮ್ ಬಝಾರ್ ಕಟ್ಟಡದ ಮಾಲೀಕ ತೋಮ್ಸನ್ರವರ ಮುಂದಾಳತ್ವದಲ್ಲಿ ಕಡಬ ಗ್ರಾಮ ಪಂಚಾಯತ್ ಅಧಿಕಾರಿಗಳ ಹಾಗೂ ಕಡಬ ಪೊಲೀಸರ ಸಹಕಾರದೊಂದಿಗೆ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.